ಸರ್ಕಾರಿ ಶಾಲಾ ಮುಖ್ಯ ಶಿಕ್ಷಕನ ಬೈಕ್ ಮೇಲೆ ಹೊರಟಿದ್ದ ಮಹಿಳೆ ಸಾವು……
ಅವಘಡವೋ ….ಅಪಘಾತವೋ…. ಗಂಭೀರ ಗಾಯಗೊಂಡ ಮುಖ್ಯ ಶಿಕ್ಷಕ
ನಡೆದದ್ದಾದರೂ ಏನು ನೋಡಿ
ಕುಣಿಗಲ್: ಸಂಚರಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ಪ್ರವಹಿಸುತ್ತಿದ್ದ ಕೇಬಲ್ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಬೈಕ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ತುಮಕೂರಿನ (tumakuru) ಕುಣಿಗಲ್ (kunigal) ನಲ್ಲಿ ನಡೆದಿದೆ
ಕುಣಿಗಲ್ ನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ, ಬಾಗಲಕೋಟೆ (bagalkot) ಜಿಲ್ಲೆಯ ಬಾದಾಮಿ (badami) ತಾಲೂಕಿನ ಚಿಂಚಲಕಟ್ಟೆ ಮೂಲದ ಲಕ್ಷ್ಮೀ ಬಾಯಿ ಜಾಧವ್ (36) ಮೃತರು.
ಕುಣಿಗಲ್ ಪಟ್ಟಣದಲ್ಲಿ ವಾಸವಿದ್ದ ಲಕ್ಷ್ಮೀ ಬಾಯಿ ಜಾಧವ್ ಕೆಲಸ ಮುಗಿಸಿ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ್ ಎಂಬವರ ಜೊತೆ ಬೈಕ್ನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿರುವ ಲಕ್ಷ್ಮಣ್ ಅವರನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗದೆ.