ಸಾಯಿ ಶ್ಯೂರ್ ರಾಗಿ ಮಾಲ್ಟ್ ವಿತರಣಾ ಕಾರ್ಯಕ್ರಮ
ಸವದತ್ತಿ ಪಟ್ಟಣದ ಗುರ್ಲಹೊಸೂರಿನ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಗುರುವಾರದಂದು ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಬಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯುಲು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಸಂಸ್ಥೆಯವರು ಉಚಿತವಾಗಿ ನೀಡುತ್ತಿರುವ ರಾಗಿ ಮಾಲ್ಟ್ ಪೂರಕ ಪೌಷ್ಠಿಕ ಆಹಾರ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸನ್ನು ವಿತರಿಸುವ ಕಾರ್ಯಕ್ರಮವನ್ನು ತಾಲೂಕಿನ ತಹಶೀಲ್ದಾರ್ ಮಧುಸೂದನ್ ಕುಲಕರ್ಣಿ.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ್ ವಾಗೇರಿ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಕಿರಣ ಕುರಿ.ನಿರ್ದೇಶಕರಾದ ಪ್ರೇಮಾ ಹಲಕಿ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರಾದ ಟಿ.ಬಿ.ಏಗನಗೌಡರ.ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ.ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ. ಗಿರೀಶ ಮುನವಳ್ಳಿ ಶಾಸಕರ ಮಾದರಿ ಶಾಲೆಯ ಪದವೀಧರ. ಮುಖ್ಯೋಪಾಧ್ಯಾಯರಾದ ಎಂ.ಬಿ.ಕಮ್ಮಾರ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸುನಿತಾ ಪಾಟೀಲ್ ಪುರಸಭೆ ಸದಸ್ಯ ದ್ಯಾಮನ್ನ ಸುತಗಟ್ಟಿ ಗಣ್ಯರಾದ ಶಿವಾನಂದ ಪಟ್ಟಣಶೆಟ್ಟಿ .ದಿಲಾವರ್ ಸನದಿ.ಪ್ರವೀಣ ಮುನವಳ್ಳಿ ಸೇರಿದಂತೆ ಪುರಸಭೆಯ ಸದಸ್ಯರು.ಎಸ್.ಡಿ.ಎಂ.ಸಿ ಸದಸ್ಯರು. ಸ್ಥಳೀಯ ಶಾಲೆಗಳ ಮುಖ್ಯೋಪಾಧ್ಯಾಯರುಗಳು.ಶಾಸಕರ ಮಾದರಿ ಶಾಲೆಯ ಶಿಕ್ಷಕ ವೃಂದ.ಬಿ.ಆರ್.ಪಿ.ಗಳು ಸಮನ್ವಯ ಶಿಕ್ಷಣ ಶಿಕ್ಷಕರಾದ ವೈ.ಬಿ.ಕಡಕೋಳ.ಸಿ.ವ್ಹಿ.ಬಾರ್ಕಿ.ಎಸ್.ಬಿ.ಬೆಟ್ಟದ.ಡಿ.ಎಲ್.ಭಜಂತ್ರಿ.ಗುರ್ಲಹೊಸೂರಿನ ಸಿಆರ್ ಪಿ ರಾಮಚಂದ್ರಪ್ಪ. ಉರ್ದು ಸಿಆರ್ ಪಿ ಎಚ್.ಎಲ್. ನದಾಫ್ ಮೊದಲಾದವರು ಉಪಸ್ಥಿತರಿದ್ದರು.
ತಹಶೀಲ್ದಾರ್ ಮಧುಸೂದನ್ ಕುಲಕರ್ಣಿ ಮಾತನಾಡಿ “ಶಾಲಾ ಮಕ್ಕಳಲ್ಲಿರುವ ಅಪೌಷ್ಠಿಕತೆ ನಿವಾರಿಸಲು ಸಿರಿ ಧಾನ್ಯಗಳ ಬಳಕೆಯ ಉಪಯುಕ್ತತೆ ಮತ್ತು ಸಿರಿ ಧಾನ್ಯಗಳಲ್ಲಿ ದೊರೆಯುವ ಬಹುಪೌಷ್ಠಿಕಾಂಶಗಳ ಕುರಿತು ಅರಿವು ಮೂಡಿಸುವ ಈ ಕಾರ್ಯ ಯಶಸ್ವಿಯಾಗಲಿ.ಮಕ್ಕಳು ಇದರ ಲಾಭವನ್ನು ಪಡೆಯುವಂತೆ ” ಕರೆ ನೀಡಿದರು,
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಮಾತನಾಡಿ “ರಾಗಿಯು ಕ್ಯಾಲ್ಷಿಯಂ ಯುಕ್ತವಾಗಿರುವುದರಿಂದ ಇದರಿಂದ ತಯಾರಿಸಲಾದ ರಾಗಿ ಮಾಲ್ಟ ವಿದ್ಯಾರ್ಥಿಗಳಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ.ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವುದು.ಇದು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.”ಎಂದು ರಾಗಿ ಮಾಲ್ಟ್ ನ ವಿಶೇಷತೆಗಳನ್ನು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ “ರಾಗಿ ಆರೋಗ್ಯಕ್ಕೆ ಉತ್ತಮವಾದ ಆಹಾರ.ಇಂದಿನಿಂದ ರಾಜ್ಯಾದ್ಯಂತ ಆಯ್ದ ಶಾಲೆಗಳಲ್ಲಿ ರಾಗಿ ಮಾಲ್ಟ್ ವಾರದಲ್ಲಿ ಮೂರು ದಿನ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ದೇಹದ ಆರೋಗ್ಯಕ್ಕೆ ಉತ್ತಮವಾಗಿದ್ದು ಇದರ ಪ್ರಯೋಜನ ಮಕ್ಕಳು ಪಡೆದುಕೊಳ್ಳಬೇಕು”ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಸಿ.ವ್ಹಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅಶ್ವಿನಿ ಮೇಟಿ ಇವಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪದವೀಧರ ಪ್ರಧಾನಗುರುಗಳಾದ ಎಂ.ಬಿ.ಕಮ್ಮಾರ ಸ್ವಾಗತಿಸಿದರು.ಆನಂದ ಬೆಳವಟಗಿ ನಿರೂಪಿಸಿದರು.ಎಂ.ಜಿ.ದೊಡಮನಿ ವಂದಿಸಿದರು.