ಹುಬ್ಬಳ್ಳಿ: ಇಂದು ಸಂಜೆ 7:00 ಗಂಟೆಯಿಂದ ಹುಬ್ಬಳ್ಳಿಯ ಹೊಟೇಲ್ ನವೀನ್ ಲಾನ್ ನಲ್ಲಿ ಮಾಜಿ ಮೇಯರ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ಅವರ ಪುತ್ರನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ರಾಜ್ಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್, ಗೃಹ ಮಂತ್ರಿ ಸನ್ಮಾನ್ಯ ಶ್ರೀ ಡಾ. ಜಿ.ಪರಮೇಶ್ವರ್ ಸೇರಿದಂತೆ ಸುಮಾರು 25 ರಿಂದ 30 ಸಚಿವರುಗಳು ಹಾಗೂ 50 ರಿಂದ 60 ಶಾಸಕರುಗಳು ಮತ್ತು ಅನೇಕ ಪ್ರಮುಖ ಮುಖಂಡರುಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರು ಭದ್ರತೆ ದೃಷ್ಟಿಯಿಂದ ಸ್ಥಳ ಪರಿಶೀಲನೆ ನಡೆಸಿದರು.
ಸಂಜೆ ಆರಂಭವಾಗುವ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದ್ದು.ಎಲ್ಲ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ.