2024 Holidays List; ಕರ್ನಾಟಕದ ಸರ್ಕಾರಿ ರಜೆಗಳ ಕರಡು ಪಟ್ಟಿ
ಬೆಂಗಳೂರು, ನವೆಂಬರ್ 23: ಕರ್ನಾಟಕದ ಸರ್ಕಾರದ 2024ನೇ ಸಾಲಿನ ಸರ್ಕಾರಿ ರಜೆ ದಿನಗಳ ಕರಡು ಪಟ್ಟಿ ಸಿದ್ಧವಾಗಿದೆ. 2 ಮತ್ತು 4ನೇ ಶನಿವಾರ, ಭಾನುವಾರಗಳನ್ನು ಹೊರತುಪಡಿಸಿ ಮುಂದಿನ ವರ್ಷದಲ್ಲಿ 21 ರಜಾ ದಿನಗಳು ಸಿಗಲಿವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2024ನೇ ಸಾಲಿನ ಸರ್ಕಾರಿ ರಜೆಗಳ ಪಟ್ಟಿಯನ್ನು ಸಿದ್ಧಗೊಳಿಸಿ ಸಚಿವ ಸಂಪುಟಕ್ಕೆ ಸಲ್ಲಿಕೆ ಮಾಡಿದೆ. ಸಂಪುಟ ಅನುಮೋದನೆ ಸಿಕ್ಕ ಬಳಿಕ ಅಂತಿಮ ಆದೇಶ ಪ್ರಕಟವಾಗಲಿದೆ.
ರಜೆ ದಿನಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಆಗುವುದಿಲ್ಲ. ಕರಡು ಪ್ರಸ್ತಾಪಕ್ಕೆ ಸಂಪುಟ ಒಂದು ಸಾಲಿನ ನಿರ್ಣಯದಲ್ಲಿ ಒಪ್ಪಿಗೆ ನೀಡಲಿದೆ. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ನೀಡಿರುವ ಪಟ್ಟಿಯನ್ನಾಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕರಡು ಪಟ್ಟಿಯನ್ನು ಸಿದ್ಧಪಡಿಸಿದೆ.
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆಗಮ ಪಂಡಿತರೊಂದಿಗೆ ಸಮಾಲೋಚಿಸಿ ಪಟ್ಟಿ ಸಿದ್ಧಪಡಿಸಿರುತ್ತಾರೆ. 2024ನೇ ಸಾಲಿನ ರಜೆ ಪಟ್ಟಿಯಲ್ಲಿ ಸಾರ್ವತ್ರಿಕ ರಜೆ ಮತ್ತು ಪರಿಮಿತ ರಜೆಗಳನ್ನು ವಿಂಗಡನೆ ಮಾಡಲಾಗಿದೆ. ರಜೆ ದಿನಗಳ ಪಟ್ಟಿ ಹೀಗಿದೆ…..
ಸಾರ್ವತ್ರಿಕ ರಜೆ ದಿನಗಳ ಪಟ್ಟಿ
* ಜನವರಿ 15, ಸೋಮವಾರ; ಮಕರ ಸಂಕ್ರಾಂತಿ
* ಜನವರಿ 26, ಶುಕ್ರವಾರ; ಗಣರಾಜ್ಯೋತ್ಸವ
* ಮಾರ್ಚ್ 8, ಶುಕ್ರವಾರ; ಮಹಾಶಿವರಾತ್ರಿ
* ಮಾರ್ಚ್ 29, ಶುಕ್ರವಾರ; ಗುಡ್ ಫ್ರೈಡೇ
* ಏಪ್ರಿಲ್ 9, ಮಂಗಳವಾರ; ಯುಗಾದಿ
* ಏಪ್ರಿಲ್ 11, ಗುರುವಾರ; ರಂಜಾನ್
* ಮೇ 1, ಬುಧವಾರ; ಕಾರ್ಮಿಕರ ದಿನ
* ಮೇ 10, ಶುಕ್ರವಾರ; ಬಸವ ಜಯಂತಿ/ ಅಕ್ಷಯ ತೃತೀಯ
* ಜೂನ್ 17, ಸೋಮವಾರ; ಬಕ್ರೀದ್
* ಜುಲೈ 17, ಬುಧವಾರ; ಮೊಹರಂ
* ಆಗಸ್ಟ್ 15, ಗುರುವಾರ; ಸ್ವಾತಂತ್ರ್ಯ ದಿನಾಚರಣೆ
* ಸೆಪ್ಟೆಂಬರ್ 7, ಶನಿವಾರ; ಗಣೇಶ ಚತುರ್ಥಿ
* ಸೆಪ್ಟೆಂಬರ್ 16, ಸೋಮವಾರ; ಈದ್ ಮಿಲಾದ್
* ಅಕ್ಟೋಬರ್ 2, ಬುಧವಾರ; ಗಾಂಧಿ ಜಯಂತಿ/ ಮಹಾಲಯ ಅಮಾವಾಸ್ಯೆ
* ಅಕ್ಟೋಬರ್ 11, ಶುಕ್ರವಾರ; ಆಯುಧ ಪೂಜೆ
* ಅಕ್ಟೋಬರ್ 17, ಗುರುವಾರ; ವಾಲ್ಮೀಕಿ ಜಯಂತಿ
* ಅಕ್ಟೋಬರ್ 31, ಗುರುವಾರ; ನರಕ ಚತುರ್ದಶಿ
* ನವೆಂಬರ್ 1, ಶುಕ್ರವಾರ; ಕನ್ನಡ ರಾಜ್ಯೋತ್ಸವ
* ನವೆಂಬರ್ 2, ಶನಿವಾರ; ದೀಪಾವಳಿ
* ನವೆಂಬರ್ 18, ಸೋಮವಾರ; ಕನಕ ಜಯಂತಿ
* ಡಿಸೆಂಬರ್ 25, ಬುಧವಾರ; ಕ್ರಿಸ್ಮಸ್
ಪರಿಮಿತ ರಜಾ ದಿನಗಳ ಪಟ್ಟಿ
* ಜನವರಿ 1, ಸೋಮವಾರ; ಹೊಸ ವರ್ಷದ ಆರಂಭ
* ಮಾರ್ಚ್ 25, ಸೋಮವಾರ; ಹೋಳಿ ಹಬ್ಬ
* ಮಾರ್ಚ್ 30, ಶನಿವಾರ; ಹೋಲಿ ಸ್ಯಾಟರ್ ಡೇ
* ಏಪ್ರಿಲ್ 5, ಶುಕ್ರವಾರ; ಜುಮಾತ್-ಉಲ್-ವಿದಾ
* ಏಪ್ರಿಲ್ 6, ಶನಿವಾರ; ಶಬ್-ಎ-ಖದ್ರ್
* ಏಪ್ರಿಲ್ 17, ಬುಧವಾರ; ಶ್ರೀ ರಾಮನವಮಿ
* ಮೇ 23, ಗುರುವಾರ; ಬುದ್ಧ ಪೂರ್ಣಿಮಾ
* ಆಗಸ್ಟ್ 16, ಶುಕ್ರವಾರ; ವರಮಹಾಲಕ್ಷ್ಮೀ ಹಬ್ಬ
* ಆಗಸ್ಟ್ 19, ಸೋಮವಾರ; ಋಗ್, ಯಜುರ್ ಉಪಕರ್ಮ
* ಆಗಸ್ಟ್ 20, ಮಂಗಳವಾರ; ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
* ಆಗಸ್ಟ್ 26, ಸೋಮವಾರ; ಶ್ರೀ ಕೃಷ್ಣ ಜನ್ಮಾಷ್ಠಮಿ
* ಸೆಪ್ಟೆಂಬರ್ 6, ಶುಕ್ರವಾರ; ಗೌರಿ ವೃತ
* ಸೆಪ್ಟೆಂಬರ್ 17, ಮಂಗಳವಾರ; ವಿಶ್ವಕರ್ಮ ಜಯಂತಿ
* ನವೆಂಬರ್ 15, ಶುಕ್ರವಾರ; ಗುರು ನಾನಕ್ ಜಯಂತಿ
* ಡಿಸೆಂಬರ್ 24, ಮಂಗಳವಾರ; ಕ್ರಿಸ್ ಮಸ್ ಈವ್