ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಎನ್ಪಿಎಸ್ ನೌಕರರ ಸಂಘದ ಪದಾಧಿಕಾರಿಗಳ ನಿಯೋಗವು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಅವರ ಗೃಹಕಚೇರಿಯಲ್ಲಿ ಭೇಟಿ ಮಾಡಲಾಯಿತು.
ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಈ ಕೆಳಕಂಡ ವಿಷಯಗಳ ಕುರಿತು ಚರ್ಚಿಸಲಾಯಿತು.
1) ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗದ ವರದಿಗಳನ್ನು ಪಡೆದುಕೊಂಡು ಅತಿ ಹೆಚ್ಚಿನ ಆರ್ಥಿಕ ಸೌಲಭ್ಯಗಳನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಅವರ ಅವಧಿಯ ಎರಡನೇ ವೇತನ ಆಯೋಗದ ಈ ಹಿಂದೆ ಯಾವ ರೀತಿ ನೌಕರ ಸ್ನೇಹಿ ವೇತನ ಆಯೋಗದ ವರದಿಗಳನ್ನು ಜಾರಿಗೊಳಿಸಿದರೊ ಅದೇ ಮಾದರಿಯಲ್ಲಿ ಜಾರಿಗೊಳಿಸಲು ಒತ್ತಾಯಿಸಲಾಯಿತು.
2) ತಮ್ಮ ಸರ್ಕಾರದ ಭರವಸೆಗಳಲ್ಲಿ ಗ್ಯಾರಂಟಿಗಳನ್ನು ನೀಡಿದ ರೀತಿಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪೆಡಂಭೂತವಾದ ಈ ಹಿಂದೆ ನಮ್ಮೆಲ್ಲರೊಂದಿಗೆ ಚರ್ಚಿಸಿದಂತೆ ಎನ್ಪಿಎಸ್ ಅನ್ನು ಶೀಘ್ರವಾಗಿ ಕಾಲಮಿತಿಯಲ್ಲಿ ರದ್ದುಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಯಿತು.
3) ವರ್ಗಾವಣೆಗೊಂಡ ಎಲ್ಲ ಶಿಕ್ಷಕರನ್ನು ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಇನ್ನುಳಿದಂತೆ ಹಲವಾರು ನೌಕರರ ಶಿಕ್ಷಕರ ಸಮಸ್ಯೆಗಳನ್ನು ಅತ್ಯಂತ ಶಾಂತವಾಗಿ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಎನ್ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮರವರು, ನೌಕರ ಸಂಘದ ನಾಯಕರಾದ ಶಿವರುದ್ರಯ್ಯನವರು, ನೌಕರ ಸಂಘದ ಇನ್ನೊರ್ವ ನಾಯಕರ ಗುರುಸ್ವಾಮಿರವರು, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಮಾರುತೇಶರವರು, ವಿಜಯನಗರ ಜಿಲ್ಲಾಧ್ಯಕ್ಷರಾದ ಬಸವರಾಜ ಸಂಗಪ್ಪನವರವರು, ಸಚಿವಾಲಯ ಕ್ಲಬ್ ನ ಕಾರ್ಯದರ್ಶಿಗಳಾದ ನಾಗಭೂಷಣರವರು, ಇನ್ನೂ ಹಲವಾರು ನೌಕರರ ಪದಾಧಿಕಾರಿಗಳು ಉಪಸ್ಥಿತರಿದ್ದರು.