ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!!
ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!!
ಯಾರಿವರು?ಏನಿದು ಪ್ರಕರಣ ನೀವೆ ನೋಡಿ
ಬೈಲಹೊಂಗಲ.. ಬೆಳಗಾವಿ ನಗರದ ಆಟೋ ನಗರದಲ್ಲಿ ಇಂದು ನಡೆಯಲಿರುವ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗ್ರಹ ನಿರ್ಮಾಣ ಸಹಕಾರ ಸಂಘದ ಸಭೆಯನ್ನು ಸಹಕಾರ ಸಂಘಗಳ ನಿಯಮಾವಳಿಗಳ
ಪ್ರಕಾರ ಕಾನೂನು ಬದ್ಧವಾಗಿ ನಡೆಸಬೇಕೆಂದು ಬೈಲಹೊಂಗಲ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ ಆಗ್ರಹಿಸಿದ್ದಾರೆ.
ಕೊವಿಡ್ ಸಂದರ್ಭದಲ್ಲಿ ನಡೆದ ಸಂಘದ ಸಭೆಯಲ್ಲಿ 959 ಸದಸ್ಯರ ನಕಲಿ ಸಹಿ ಮಾಡಿ ಸಭೆಯ ಹಾಜರಾತಿಗೆ ತೋರಿಸಲಾಗಿತ್ತು.
ಸಂಘದ ಅಧ್ಯಕ್ಷರು ವಾರ್ಷಿಕ ಮಹಾಸಭೆಯಲ್ಲಿ ಮಂಡಿಸದೆ ಸಂಘದ ಹೆಸರಿನಲ್ಲಿ ಎರಡು ಇನೋವಾ ಕಾರುಗಳನ್ನು ನಿಯಮಾವಳಿ ಮೀರಿ, ಅನುಮತಿ ಪಡೆಯದೆ
ತನ್ನ ಸ್ವಂತ ಹೆಸರಿನಲ್ಲಿ ಖರೀದಿಸಿದ್ದರು. ಇದು ದುಂದುವೆಚ್ಚದ್ದಾಗಿದೆ.
ನೌಕರರಿಂದ ಹಣ ಸಂಗ್ರಹಿಸಿ
ಸಂಘದ ಅಧ್ಯಕ್ಷ ಜಗದೀಶ ಗೌಡಪ್ಪ ಪಾಟೀಲ ಕಳೆದ 12 ವರ್ಷಗಳಿಂದ ಹಲವಾರು ಸದಸ್ಯರಿಗೆ ನಿವೇಶನ ನೀಡದೆ ವಂಚಿಸುತ್ತಿದ್ದಾರೆ. ಸಂಘದ ಲೆಕ್ಕಪತ್ರ ಸರಿಯಾಗಿಲ್ಲ ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಬಗ್ಗೆ ಇಲಾಖೆಯಿಂದ ತನಿಖೆ ಕೂಡಾ ನಡೆದಿದೆ.
ಇದನ್ನು ಎಲ್ಲ ಸದಸ್ಯರು ಖಂಡಿಸಿ, ತಕರಾರು ಮಾಡಲು ಮುಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ.