4ನೇ ತರಗತಿ ಬೋಧಿಸುವ ಸರ್ಕಾರಿ ಅನುದಾನಿತ FLN ಕುರಿತು ಕಾರ್ಯಗಾರ..
ಮಾನ್ಯ ಉಪನಿರ್ದೇಶಕರು ಗದಗ ಶ್ರೀ ಎಮ್. ಎ. ರಡ್ಡೆರ್ ಸಾಹೇಬರು ಇಂದು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ 4ನೇ ತರಗತಿ ಬೋಧಿಸುವ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ FLN ಕುರಿತು ಮಾರ್ಗದರ್ಶನ ಮಾಡಿದರು.
ಶಿಕ್ಷಕರು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬೇಕು, ಯಾವ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು ಎಂದು ವಿವಿಧ ಉದಾಹರಣೆಗಳನ್ನು ನೀಡುವ ಮೂಲಕ ಶಿಕ್ಷಕರಿಗೆ ಸ್ಫೂರ್ತಿಯ ಮಾತುಗಳನ್ನು ಹೇಳಿದರು 4ನೇ ತರಗತಿಯ ಪ್ರತಿಯೊಂದು ಮಗುವಿಗೂ ಸ್ಪಷ್ಟ ಓದು ಶುದ್ದ ಬರಹ 20ರ ತನಕ ಮಗ್ಗಿ ಕಡ್ಡಾಯವಾಗಿ ಬರುವಂತೆ ತರಗತಿ ಕೋಣೆಯಲ್ಲಿ ಚಟುವಟಿಕೆಗಳು ನಡೆಯಬೇಕೆಂದು ಸೂಚಿಸಿದರು ಈ ಒಂದು ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ G.M.ಮುಂದಿನಮನಿ ಕ್ಷೇತ್ರ ಸಮ್ವಯಾಧಿಕಾರಿ ಶ್ರೀ B.S.ಭಜಂತ್ರಿ ಮತ್ತು ನೋಡಲ್ BRP ಯಾದ ಶ್ರೀ ವಾಸು ದೀಪಾಲಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ S.F.ಮಠದ, ಶ್ರೀ ಬುಕ್ಕಿಟ್ ಗಾರ್ SIR CRP ಗಳಾದ R ಮಂತೇಶ್, ತಿರಕಪ್ಪ ಪೂಜಾರ, ಗಿರೀಶ ನೇಕಾರ್,ಚಂದ್ರಶೇಕರ ವಡಕಣ್ಣವರ್, ಶ್ರೀ ಮತಿ ಸರ್ವಿ ಮೇಡಂ, ಶ್ರೀ ಎಂ. ಬಿ.ತಹಶೀಲ್ದಾರ್, ಸತೀಶ ಪಶುಪತಿಹಾಳ,ಶ್ರೀ ಅಸುಂಡಿ ಮತ್ತು ಎಲ್ಲ ಶಾಲೆಗಳ ಶಿಕ್ಷಕರು ಹಾಜರಿದ್ದರು.