ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ, ಮುಂಬಡ್ತಿ ಸೇರಿದಂತೆ ವೇತನ ಹೆಚ್ಚಳಕ್ಕೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ( Computer Literacy Test -CLT ) ಕಡ್ಡಾಯಗೊಳಿಸಲಾಗಿದೆ. ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ಉತ್ತೀರ್ಣರಾಗಲು ಅವಕಾಶ ನೀಡಲಾಗಿದೆ.
ಈಗಾಗಲೇ ಉತ್ತೀರ್ಣರಾಗಿರುವಂತ ಸರ್ಕಾರಿ ನೌಕರರಿಗೆ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ಆದೇಶಿಸಿದೆ.
ಈ ಸಂಬಂಧ ಖಜಾನೆ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲಾ ಖಜಾನೆಗಳ ಪ್ರಬಾರಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ರಾಜ್ಯ ಸರ್ಕಾರಿ ಆದೇಶಗಳಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಜಾರಿಗೆ ಬಂದ ದಿನಾಂಕ 22.03.2012 ರಂದು ಸೇವೆಯಲ್ಲಿದ್ದು, ದಿನಾಂಕ 17.04.20210vn ಸದರಿ ಪರಿಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಧಿಕಾರಿ/ನೌಕರರಿಗೆ ಪ್ರೋತ್ಸಾಹ ಧನ ಪಾವತಿಸುವಂತೆ ಆದೇಶಿಸಲಾಗಿದೆ ಎಂದಿದೆ.
ಅದರಂತೆ ತಮ್ಮ ಕಛೇರಿಯಲ್ಲಿ (ಅಧೀನ ಉಪ ಖಜಾನೆಗಳನ್ನೊಳಗೊಂಡು) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇದುವರೆವಿಗೂ ಪ್ರೋತ್ಸಾಹ ಧನವನ್ನು ಪಡೆಯದೇ ಇರುವ ಅರ್ಹ ಅಧಿಕಾರಿಗಳು/ನೌಕರರು ಹಾಜರು ಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು ಅವರಿಗೆ ಪ್ರೋತ್ಸಾಹ ಧನವನ್ನು ಪಾವತಿಸುವ ಸಲುವಾಗಿ ಲೆಕ್ಕಶೀರ್ಷಿಕೆ 2054-00-095-0-01 ಆಬೈಕ್ ಕೊಡ್ 015 ರಡಿಯಲ್ಲಿ ಬೇಕಾಗುವ ಅನುದಾನದ ಮಾಹಿತಿಯೊಂದಿಗೆ ದಿನಾಂಕ 05.08.2023ರ ಒಳಗಾಗಿ ಆಯುಕ್ತಾಲಯಕ್ಕೆ ಪುಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ಖಜಾನೆ ಇಲಾಖೆಯಿಂದ ಆಯಾ ಜಿಲ್ಲೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದಂತ ಸರ್ಕಾರಿ ನೌಕರರ ಮಾಹಿತಿ ಪಡೆದ ಬಳಿಕ, ಶೀಘ್ರದಲ್ಲೇ ಸಿಎಲ್ ಟಿ ಪರೀಕ್ಷೆ ಉತ್ತೀರ್ಣ ರಾಜ್ಯ ಸರ್ಕಾರಿ ನೌಕರರಿಗೆ ಪ್ರೋತ್ಸಾಹಧನ ಖಾತೆಗೆ ಜಮಾ ಆಗಲಿದೆ.