ಹೆಬಸೂರ ಶಾಲಾ ಬಾಲೆಯರಿಗೆ ID CARD ವಿತರಣೆ
ಹುಬ್ಬಳ್ಳಿ:
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯ ಎರಡನೂರ ಐವತ್ತೊಂದು ವಿದ್ಯಾರ್ಥಿನಿಯರಿಗೆ ಸಂಪೂರ್ಣ ಮುಖ್ಯ ಮಾಹಿತಿ ಹೊಂದಿರುವ ಶಾಲೆಯಲ್ಲಿರುವವರೆಗೂ ಅನ್ವಯಿಸುವಂತೆ ಗುರುತಿನ ಪತ್ರ (ID CARD ) ಗಳನ್ನು ವಿತರಿಸಲಾಯಿತು.
ಎಸ್.ಡಿ.ಎಮ್.ಸಿ.ಸದಸ್ಯರಾದ ವೆಂಕಣ್ಣ ತಳವಾರ ಶಾಲಾ ಪ್ರ.ಗು.ಲತಾ ಗ್ರಾಮಪುರೋಹಿತ.ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ಹಾಗೂ ದೇವೇಂದ್ರ ಪತ್ತಾರ.ದ್ರಾಕ್ಷಾಯಿಣಿ ಕೊರಗರ.ಶಾರದಾ ಕಂಬಳಿ.ಸುಧಾ ಕೊಣ್ಣೂರ.ಗೀತಾ.ಕೆಂಚರಡ್ಡಿ ಮುಂತಾದವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.