ರವರಿಗೆ
ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮುಖ್ಯ ಮಂತ್ರಿರವರು
ಕರ್ನಾಟಕ ಸರ್ಕಾರ ಹಾಗೂ
ಸನ್ಮಾನ್ಯ ಶ್ರೀ D.K ಶಿವಕುಮಾರ್ ಮಾನ್ಯ ಉಪ ಮುಖ್ಯ ಮಂತ್ರಿ ರವರು ಹಾಗು
ಸನ್ಮಾನ್ಯ ಶ್ರೀ K.H ಮುನಿಯಪ್ಪ ರವರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು..
ಸನ್ಮಾನ್ಯರೆ
ವಿಷಯ ಹೊಸದಾಗಿ BPL. ಮತ್ತು APL ಪಡಿತರ ಚೀಟಿ
ರೇಷನ್ ಕಾರ್ಡ್ ಸೌಲಭ್ಯ ವನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿ ಕೊಡುವ ಬಗ್ಗೆ.
ಸನ್ಮಾನ್ಯರೆ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಸಮುದಾಯದ ನಾಗರಿಕರಿಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ಗೃಹ ಲಕ್ಷ್ಮಿ ಯೋಜನೆ (ಗ್ಯಾರೆಂಟಿ ಯೋಜನೆಗೆ ) ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪಡಿತರ ಚೀಟಿ ಸೌಲಭ್ಯ ವನ್ನು ಹೊಂದಿರುವವರಿಗೆ ಮಾತ್ರ ಅವಕಾಶ ಕಲ್ಪಿಸಿ ಕೊಟ್ಟಿರುವ ಕಾರಣಗಳಿಂದ ಹಾಗೂ ಕರ್ನಾಟಕ ಸರ್ಕಾರ ನಾಗರಿಕರಿಗೆ ಉಚಿತ ಆಹಾರ ಸೌಲಭ್ಯ ವನ್ನು ಕಲ್ಪಿಸಿ ಕೊಟ್ಟಿರುವ ಕಾರಣ ದಿನ ನಿತ್ಯ ಆಹಾರ ಸೌಲಭ್ಯ ವನ್ನು ಬಳಸಿಕೊಂಡು ಜೀವನ ನಿರ್ವಹಣೆ ಮಾಡಲು ಹಾಲಿ
ಹೊಸದಾಗಿ B.P. L ಮತ್ತು A.P.L ಸೌಲಭ್ಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಬಡವ ಬಲ್ಲಿದ ಸಮುದಾಯದವರಿಗೆ ತುಂಬಾ ಅವಶ್ಯಕತೆ ಇರುತ್ತದೆ ಆದ್ದರಿಂದ ಕರ್ನಾಟಕ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ ಮತ್ತು ಉಚಿತ ಆಹಾರ ಸೌಲಭ್ಯ ವನ್ನು ಹಾಲಿ ಪಡಿತರ ಚೀಟಿ ತುಂಬಾ ಅವಶ್ಯಕತೆ ಇರುವುದರಿಂದ ತ್ವರಿತವಾಗಿ
ಗ್ರಾಮ 01ಕೇಂದ್ರ ಗಳಿಗೆ . ಅಥವಾ ಕರ್ನಾಟಕ ಆನ್ ಲೈನ್ 01. ಕೇಂದ್ರದ ಮೂಲಕ ಅರ್ಜಿ ಸಲ್ಲಿಸಲು
ಸನ್ಮಾನ್ಯ ಮುಖ್ಯ ಮಂತ್ರಿ ಸಾಹೇಬರು ಹಾಗೂ ಸನ್ಮಾನ್ಯ ಉಪ ಮುಖ್ಯ ಮಂತ್ರಿ ಸಾಹೇಬರು ಹಾಗೂ ಸನ್ಮಾನ್ಯ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಯ ಸಚಿವರು ತಕ್ಷಣ ಸ್ಪಂದಿಸುವ ಮೂಲಕ BPL ಮತ್ತು APL ಪಡಿತರ ಚೀಟಿ ಸೌಲಭ್ಯ ವನ್ನು ಪಡೆದುಕೊಂಡು ಅವಶ್ಯಕತೆ ಇರುವ ಗೃಹ ಲಕ್ಷ್ಮೀ ಯೋಜನೆಗೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ & ಹಿಂದುಳಿದ ಸಮುದಾಯದವರಿಗೆ ಉತ್ತಮ ಜೀವನ ಸಾಗಿಸಲು ಮಾನ್ಯ ಆಯುಕ್ತರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ NO 08. ಕನ್ನಿOಗ್ ಹ್ಯಾO ರಸ್ತೆ ಬೆಂಗಳೂರು 52. ರವರಿಗೆ ತುರ್ತು BPL ಮತ್ತು APL ಪಡಿತರ ಚೀಟಿ ಸೌಲಭ್ಯ ವನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ
ಗೌರವ ವಂದನೆಗಳೊಂದಿಗೆ ಇಂತಿ ತಮ್ಮ ನಂಬುಗೆಯ.
J. M. ರಾಜ ಶೇಖರ್
ಮಾಹಿತಿ ದರ್ಬಾರ್
ಸಾಮಾಜಿಕ ಕಾರ್ಯ ಕರ್ತರು R.T.I
ಮತ್ತು ಜರ್ನಲಿಸ್ಟ್
ರಾಣಿ ಬೆನ್ನೂರ್ ಹಾವೇರಿ ಜಿಲ್ಲೆ