ಕ.ರಾ.ಸ.NPS ನೌಕರರ ಸಂಘ. ತಾಲೂಕು ಘಟಕ ರಟ್ಟಿಹಳ್ಳಿ..
ಆತ್ಮೀಯ NPS ನೌಕರ ಬಾಂಧವರೇ
ಇಂದು ರಟ್ಟಿಹಳ್ಳಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಯು ಬಿ ಬಣಕಾರ್ ರವರನ್ನು NPS ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು…
ಅಂತೆಯೇ ಮಾನ್ಯ ಶಾಸಕರಿಗೆ ಜುಲೈ 3 ರಿಂದ ಆರಂಭವಾಗುವ ಅಧಿವೇಶನದಲ್ಲಿ NPS ರದ್ದತಿಗಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದು NPS ರದ್ದು ಮಾಡಲು ಒತ್ತಡ ಹೇರಬೇಕೆಂದು ಮನವಿ ಪತ್ರ ನೀಡಲಾಯಿತು. ಮಾನ್ಯರು ಸಕಾರಾತ್ಮಕವಾಗಿ ಸ್ಪಂದಿಸಿ ಖಂಡಿತವಾಗಿಯೂ ತಮ್ಮ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ಮಾನ್ಯ ಈಗಾಗಲೇ ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ ಎಂದರು. ಮಾನ್ಯ ಮುಖ್ಯಮಂತ್ರಿಗಳು ಕೂಡ ತಮ್ಮ ಪರವಾಗಿ ಇದ್ದಾರೆ. ಈಗಾಗಲೇ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಶ್ರೀ ಸಿದ್ದಪ್ಪ ಸಂಗಣ್ಣನವರ್ ಎನ್ಪಿಎಸ್ ರದ್ದತಿಗೆ ಸಂಘವು ನಡೆಸಿದ ಪ್ರಯತ್ನದ ಬಗ್ಗೆ ತಿಳಿಸಿದರು. ಮತ್ತು ಶಾಸಕರಿಗೆ ಎನ್ ಪಿ ಎಸ್ ರದ್ದತಿಗೆ ಧ್ವನಿಗೂಡಿಸಬೇಕು ಎಂದು ಹೇಳಿದರು.
ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ ಪ್ರವೀಣ್ ಕರ್ಜಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಟ್ಟಿಹಳ್ಳಿ, ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ರಟ್ಟಿಹಳ್ಳಿ, ಕ್ಷೇತ್ರಶಿಕ್ಷಣಾಧಿಕಾರಿಗಳು ರಟ್ಟಿಹಳ್ಳಿ ರವರು ಪಾಲ್ಗೊಂಡಿದ್ದರು.
ಶಾಸಕರಿಗೆ ಅಭಿನಂದನೆ ಹಾಗೂ ಮನವಿ ಪತ್ರ ನೀಡುವ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು.
ಕ.ರಾ.ಸ.NPS ನೌಕರರ ಸಂಘ – ರಟ್ಟಿಹಳ್ಳಿ ಘಟಕ