ನ್ಯೂಸ್ ಡೆಸ್ಕ್….
ಪೋಷಕರು ಹೊರಗಿನ ಆಹಾರವನ್ನು ತಂದು ಮಕ್ಕಳಿಗೆ ನೀಡುತ್ತಾರೆ. ಆದರೆ ಈ ಫಾಸ್ಟ್ ಫುಡ್ ಇಬ್ಬರು ಮಕ್ಕಳ ಪ್ರಾಣವನ್ನೇ ತೆಗೆದಿದೆ. ಇಂತಹ ಪ್ರಕರಣ ಹರಿಯಾಣದ ಸೋನಿಪತ್ನಲ್ಲಿ ಮುನ್ನೆಲೆಗೆ ಬಂದಿದೆ.
ಅಲ್ಲಿ ನೂಡಲ್ಸ್, ಪರೋಟ ತಿಂದ ಮೂವರು ಮಕ್ಕಳ ಆರೋಗ್ಯ ಹದಗೆಟ್ಟಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ವೇಳೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತೊಂದು ಮಗುವಿನ ಸ್ಥಿತಿಯೂ ಗಂಭೀರವಾಗಿದೆ.
ಫುಡ್ ಪಾಯಿಸನ್ ಶಂಕೆ
ಮಾಹಿತಿ ಪ್ರಕಾರ ಭೂಪೇಂದ್ರ ಎಂಬುವವರ ಕುಟುಂಬದವರು ಬುಧವಾರ ರಾತ್ರಿ ಪರೋಟ ಮತ್ತು ನೂಡಲ್ಸ್ ತಿಂದಿದ್ದಾರೆ. ನಂತರ ಇಡೀ ಕುಟುಂಬ ರಾತ್ರಿ ಆರಾಮವಾಗಿ ಆದರೆ ರಾತ್ರಿ ಒಂದು ಗಂಟೆ ಸುಮಾರಿಗೆ ಭೂಪೇಂದ್ರ ಅವರ ಮೂವರು ಮಕ್ಕಳ ಸ್ಥಿತಿ ತೀವ್ರ ಹದಗೆಟ್ಟಿತು. ನಂತರ ಮೂವರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಗಂಭೀರ ಸ್ಥಿತಿ ಕಂಡು ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಬ್ಬರು ಮಕ್ಕಳ ಸಾವು, ಒಬ್ಬನ ಸ್ಥಿತಿ ಗಂಭೀರ
ಆದರೆ ಗುರುವಾರ ಬೆಳಿಗ್ಗೆ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 7 ವರ್ಷದ ಬಾಲಕಿ ಹೇಮಾ ಮತ್ತು 5 ವರ್ಷದ ಬಾಕ ತರುಣ್ ಎಂದು ತಿಳಿದುಬಂಧಿದೆ. ಇಬ್ಬರು ಮಕ್ಕಳ ಸಾವಿನ ಸುದ್ದಿ ಕೇಳಿ ತಾಯಿಯ ಸ್ಥಿತಿಯೂ ಹದಗೆಟ್ಟಿದೆ. ಇದೇ ವೇಳೆ 8 ವರ್ಷದ ಮಗ ಪ್ರವೇಶ್ ಚಿಕಿತ್ಸೆ ಇನ್ನೂ ಮುಂದುವರಿದಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ
ಘಟನೆಯ ಮಾಹಿತಿ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಇಬ್ಬರ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ದೇವೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ. ಸಂಬಂಧಿಕರ ಪ್ರಕಾರ, ನೂಡಲ್ಸ್ ಅನ್ನು ನೆರೆಹೊರೆಯ ಫಾಸ್ಟ್ಫುಡ್ ಸೆಂಟರ್ನಿಂದಲೇ ಖರೀದಿಸಲಾಗಿದೆ, ಅದನ್ನು ತಿಂದ ನಂತರ ಮಕ್ಕಳ ಸ್ಥಿತಿ ಹದಗೆಟ್ಟು, ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಏಜೆನ್ಸಿ…