ರಾಜ್ಯ ಸರಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಎಚ್.ಕೆ.ಪಾಟೀಲ..
ಬೆಂಗಳೂರು:
ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾದಂತ 7ನೇ ರಾಜ್ಯ ವೇತನ ಜಾರಿ ಹಾಗೂ NPS ರದ್ದುಗೊಳಿಸಿ, OPS ಜಾರಿಗೆ ಸಿಎಂ ಸಿದ್ಧರಾಮಯ್ಯ ಅವರ ಗಮನ ಸೆಳೆಯುವುದಾಗಿ ಇಂದು ಸಚಿವ ಹೆಚ್ ಕೆ ಪಾಟೀಲ್ ಭರವಸೆ ನೀಡಿದ್ದಾರೆ.ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಶುಭಸುದ್ದಿಯನ್ನು ನೀಡಿದ್ದಾರೆ.
ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರು ಸಂಸದೀಯ ಮತ್ತು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರನ್ನು ಅಭಿನಂದಿಸಿ, 7ನೇ ವೇತನ ಆಯೋಗದ ಅನುಷ್ಠಾನ ಹಾಗೂ ಓಪಿಎಸ್ ಜಾರಿಗೊಳಿಸುವ ಸರ್ಕಾರಿ ನೌಕರ ಪರವಾಗಿ ಸದನದಲ್ಲಿ ಮಾತನಾಡುವಂತೆ ಕೋರಿದರು.
ಸರ್ಕಾರಿ ನೌಕರರ ಕೋರಿಕೆಗೆ ಪ್ರತಿಸ್ಪಂದಿಸಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಶೀಘ್ರವೇ ಎನ್ ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿ ಹಾಗೂ 7ನೇ ವೇತನ ಆಯೋಗ ಜಾರಿಯ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನೌಕರರ ಸಂಘದ ಉಪಾಧ್ಯಕ್ಷರಾದ ಶ್ರೀ ಎನ್ ಮಾಲ್ತೇಶ್, ರಾಜ್ಯ ಕಾರ್ಯದರ್ಶಿಯಾದ ಡಾ, ನೆಲ್ಕುದ್ರಿ ಸದಾನಂದ , ಶ್ರೀ ವೇಣಗೋಪಾಲ್, ಶ್ರೀ ಚೇತನ್, ಶ್ರೀ ನಾಗನಗೌಡ , ಇವರುಗಳು ಉಪಸ್ಥಿತರಿದ್ದರು.
Please hike retirement age 🙏🏻🙏🏻
Yes we need to increase retirement age of all those government employees who are willing to work for benefit of people and are fit. Most of the states from North and also andhra has increased retirement age. People are living longer ,life span which was 60 yrs 25 yrs ago is now around 70 yrs now .
Why sir, Try to help younger generations also,
Very good news
S…. Employment is essential to all.
we have to help younger generations according to me 58 years is more than enough.
Seniors above 60 years should not become greedy . They should allow young people to serve and get promotion.