ಅಮ್ಮ.
ಮಾತೆ ನಿನ್ನ ಹೃದಯ ಸಮುದ್ರದಷ್ಟು ಆಳ.
ತುಂಬಿಕೊಂಡಿರುವೆ ನಿನ್ನ ಮಡಿಲಲ್ಲಿ ಮಮತೆ ಪ್ರೀತಿಯ ಗಾಳ.
ಬೇಧ ತೋರದು ಎಲ್ಲ ಮಕ್ಕಳಿಗೂ ಸಮಚಿತ್ತದ ಒಡಲು.
ನೋಡಿದರೆ ನಿನ್ನ ನಗು ಮೊಗ
ಕಣ್ಣಲ್ಲಿ ತುಂಬುವವು ಆನಂದ ಭಾಷ್ಪಗಳು.
ಮಕ್ಕಳನು ಜತನದಿ ಸಾಕಲು ಮುಡಿಪಿಟ್ಟೆ ನಿನ್ನ ಜೀವ.
ಅಮ್ಮ ನಿನ್ನ ತ್ಯಾಗ ತುಂಬಿದ ಮುಖ ನೋಡಿದರೆ ಸ್ವರ್ಗದಲ್ಲಿರುವ ಭಾವ.
ಎಷ್ಟೊಂದು ಸಹನೆ ಎಷ್ಟೊಂದು ಕರುಣೆ ನಿನ್ನಲ್ಲಿ.
ಮನೆ ಮನಗಳ ಹಸಿರು ತೋರಣವಾದೆ ನಮ್ಮ ಕುಟುಂಬದಲ್ಲಿ.
ಮುಂಜಾನೆಯ ಸೂರ್ಯನಂತೆ, ಹುಣ್ಣಿಮೆಯ ಬೆಳದಿಂಗಳಂತೆ
ಬತ್ತಲಾರದ ಮಮತೆ ಪ್ರೀತಿ ವಾತ್ಸಲ್ಯಗಳ ಸಂಗಮವಂತೆ.
ಹಂಚುತಿರುವೆ ಬಿಡುವಿಲ್ಲದೆ ಚೂರು ಏರು ಪೇರಾಗದಂತೆ.
ಬರೆಯಲು ಸಾಲವು ಶಬ್ದಗಳು ನಿನ್ನ ತಾಯಗುಣ ದ ಮಹಿಮೆ.
ತೋರುತಿಹುದು ಲೋಕದಲ್ಲಿ ನಡೆದಾಡುವ ನೈಜ ದೇವರು ಅಮ್ಮನೆಂಬ ಹಿರಿಮೆ.
ಮೂಡುತಿರುವುದು ಮನದಲ್ಲಿ
ನಾನಿನ್ನ ಮಗಳಾಗಿರುವುದು ಸಾರ್ಥಕ ವೆಂಬ ಗರಿಮೆ.
ತೀರಿಸಲು ಅಸಾದ್ಯ ನಿನ್ನೀ ಋಣ ಭಾರದ ಒಲುಮೆ.
ಅದಕ್ಕಾಗಿ ಸಮರ್ಪಿಸುವೆ ನಿನ್ನ ಪವಿತ್ರ ಪಾದಕಮಲಗಳಿಗೆ ನನ್ನೀ ಕವನದ ಚಿಲುಮೆ.
ಉಮಾದೇವಿ. ಯು. ತೋಟಗಿ .
ಬೈಲಹೊಂಗಲ್.
ವಿಶ್ವ ಅಮ್ಮಂದಿರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.🙏🙏🌹🌹