SSLC ಪರೀಕ್ಷೆಯ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಮುಖ್ಯವಾದ ಮಾಹಿತಿ..
SSLC ಪರೀಕ್ಷೆ ನಿರ್ವಹಣೆಗಳಿಗೆ ಹೊಸ ನಿಯಮಗಳು ಜಾರಿ…
ಉಳಿದ ಪರೀಕ್ಷೇಗಳನ್ನು ಈ ಕ್ರಮದಲ್ಲೆ ನಡೆಸಿ…
ವಿದ್ಯಾರ್ಥಿಗಳು ಪರೀಕ್ಷೇಗಳನ್ನು ಹೀಗೆ ಬರೆಯಬೇಕು!!
ಮಾನ್ಯ ನಿರ್ದೇಶಕರು ಡಿ.ಎಸ್.ಇ.ಆರ್.ಟಿ ಬೆಂಗಳೂರು ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳು, ದಿನಾಂಕ:27.03.2024ರಂದು ಸಂಜೆ 4.30ರಿಂದ 5 ಗಂಟೆಯವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷಾ ನಿರ್ವಹಣೆ ಕುರಿತು ಹಮ್ಮಿಕೊಂಡ ಗೂಗಲ್ ಮೀಟ್ ಸಭೆಯಲ್ಲಿ ತಿಳಿಸಿದ ಅಂಶಗಳು
1) ಸಿ.ಸಿ ಕ್ಯಾಮರಾಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಗಳು ಪರೀಕ್ಷಾ ಅವಧಿಯಲ್ಲಿ ವೀಕ್ಷಿಸುತ್ತಾ ಪರೀಕ್ಷಾ ಅವ್ಯವಹಾರಗಳು ಕಂಡು ಬಂದ ತಕ್ಷಣ ಮುಖ್ಯ ಅಧೀಕ್ಷಕರಿಗೆ ವರದಿ ಮಾಡುವುದು.
2) ಈ ಬಾರಿ ಪ್ರತಿ ಪರೀಕ್ಷಾ ಕೇಂದ್ರದ ಸಿ.ಸಿ ಕ್ಯಾಮರಾಗಳನ್ನು ಪರೀಕ್ಷಾ ಕೇಂದ್ರದಲ್ಲಿ ಅಷ್ಟೇ ಅಲ್ಲದೇ, ತಾಲ್ಲೂಕು ಕಂಟ್ರೋಲ್ ರೂಂ( ಬಿ.ಇ.ಓ ಕಛೇರಿ) ಜಿಲ್ಲಾ ಕಂಟ್ರೋಲ್ ರೂಂ( ಜಿಲ್ಲಾ ಪಂಚಾಯಿತಿ) ರಾಜ್ಯ ಕಂಟ್ರೋಲ್ ರೂಂ( ಆಯುಕ್ತರ ಕಛೇರಿ)ಗಳಲ್ಲಿ ಏಕ ಕಾಲದಲ್ಲಿ ವೀಕ್ಷಿಸುತ್ತಿರುವ ಮಾಹಿತಿಯನ್ನು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿಗಳು ತಿಳಿದಿರಬೇಕು. ಈ ಬಾರಿಯ ಪರೀಕ್ಷೆಯ ಸೂಕ್ಷ್ಮತೆ ಬಗ್ಗೆ ತಿಳಿದಿರಬೇಕು. ಇನ್ನು ಮುಂದಿನ ಪರೀಕ್ಷೆಗಳು ವ್ಯವಸ್ಥಿತವಾಗಿ ಹಮ್ಮಿಕೊಳ್ಳಲು ಕಾರ್ಯ ರೂಪಿಸಿಕೊಳ್ಳಬೇಕು.
3) ಅಧಿಕಾರಿಗಳು ಒಂದೇ ಕಡೆ ಕುತಿರಬಾರದು. ಓಡಾಡುತ್ತೀರಬೇಕು. ಸಿ.ಸಿ ಕ್ಯಾಮರಾ ವೀಕ್ಷಣೆ ಮಾಡುತ್ತಿರಬೇಕು. ಯಾವುದಾದರೂ ಕೊಠಡಿಗಳಲ್ಲಿ ಪರೀಕ್ಷಾ ನಿಯಮಗಳಿಗೆ ವಿರುದ್ಧ ವಾತಾವರಣ ಕಂಡು ಬಂದಲ್ಲಿ ತಕ್ಷಣ ಅಲ್ಲಿ ಹೋಗಿ ಮಾರ್ಗದರ್ಶನ ನೀಡಬೇಕು.
4) ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ ಕ್ಯಾಮರಾಗಳಿಗೆ ಮುಖ ಕಾಣುವಂತೆ ಡೆಸ್ತುಗಳ ಜೋಡಣಿ ಮಾಡಬೇಕು.( ಮಾನ್ಯ ಆಯುಕ್ತರ ಸೂಚನೆಯನ್ವಯ)
೮) ಆರೋಗ್ಯ ಕಾರ್ಯಕರ್ತರಿಗೆ ಬಿಸಿಲಲ್ಲಿ ಕೂರಿಸದೇ, ನರಳಿನ ವ್ಯವಸ್ಥೆ ಮಾಡಬೇಕು.
6) ಪರೀಕ್ಷಾ ಕೊಠಡಿಯಲ್ಲಿರುವ ಸಿ.ಸಿ ಕ್ಯಾಮರಾಕ್ಕೆ ಎಲ್ಲಾ ಮಕ್ಕಳು ಕಾಣುವಂತಿರಬೇಕು.
7) ಬೆಂಚು ಮಧ್ಯ ಅಂತರ ಇರಬೇಕು. ಕೆಲವೊಂದು ಪರೀಕ್ಷಾ ಕೊಠಡಿಗಳಲ್ಲಿ ವಿಶಾಲವಾದ ಜಾಗವಿದ್ದಾಗ್ಯೂ ಹತ್ತಿರ ಹತ್ತಿರ ಬೆಂಚುಗಳನ್ನು ಹಾಕಿರುವುದು ಕಂಡು ಬಂದಿದೆ.
8) ಸಿ.ಸಿ ಕ್ಯಾಮರಾ ಇರುವ ಕಡೆಗಳಲ್ಲಿಯೇ ಭದ್ರತಾ ಕೊಠಡಿ ಇದ್ದರೆ ವೀಕ್ಷಣೆಗೆ ಹೆಚ್ಚು ಅನುಕೂಲವಾಗುತ್ತದೆ.
9) ಗ್ರಾಮೀಣ ಪ್ರದೇಶದ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮರಾ ಹೆಚ್ಚು ವೀಕ್ಷಣೆ ಮಾಡಬೇಕು. ಜಾಗೃತ ದಳದ ಅಧಿಕಾರಿಗಳು ಹೆಚ್ಚು ಭೇಟಿ ನೀಡಬೇಕು.
10) ಜಿಲ್ಲಾ ಕಂಟ್ರೋಲ್ ರೂಂ ನಲ್ಲಿ ಕೆಲವು ಪರೀಕ್ಷಾ ಕೇಂದ್ರಗಳನ್ನು ವೆಬ್ ಕ್ಯಾಮರಾದಲ್ಲಿ ವೀಕ್ಷಣೆ ಮಾಡಿದ್ದಾಗ ವಿದ್ಯಾರ್ಥಿಗಳು ಆ ಕಡೆ, ಈ ಕಡೆ ನೋಡುತ್ತಿರುವುದನ್ನು ಗಮನಿಸಲಾಗಿದೆ. ಕೊಠಡಿ ಮೇಲ್ವಿಚಾರಕರಿಗೆ ಮುಂದಿನ ಪರೀಕ್ಷಾ ದಿನದಂದು ಮತ್ತೋಮ್ಮೆ 10 ನಿಮಿಷಗಳ ಕಾಲ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಈ ಬಾರಿಯ ಪರೀಕ್ಷೆಯ ಬಾರಿ ತರಬೇತಿ ನೀಡಲು ತಿಳಿಸಿರುತ್ತಾರೆ.
11) ಏನಾದರೂ ಅಹಿತಕರ ಘಟನೆಗಳು ಮುಂದಿನ ಪರೀಕ್ಷಾ ದಿನದಂದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಹೇಳಿರುತ್ತಾರೆ.