FACE BOOK ನಲ್ಲಿ POST…
ಶಿಕ್ಷಕನಿಗೆ BEO ನೋಟೀಸ್…⁉️
ವಿಜಯಪುರ: ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವಾಗ ಅತಿಥಿ. ಶಿಕ್ಷಕರೊಬ್ಬರು ಒಂದು ಧರ್ಮದ ಹಾಗೂ ಪಕ್ಷದ ವಿರುದ್ಧ ಸಮೂಹ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ ಕಾರಣಕ್ಕೆ ಬಿಇಒ ನೋಟಿಸ್ ಜಾರಿ ಮಾಡಿರುವ ಘಟನೆ ಜರುಗಿದೆ. ಶಾಲಾ ಶಿಕ್ಷಣ ಇಲಾಖೆಯ ವಿಜಯಪುರ ಗ್ರಾಮೀಣ ವಲಯದ ಬಿಇಒ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕ ಚಂದ್ರು ಮಾಳಿ ಎಂಬಾತನಿಗೆ ನೋಟಿಸ್ ಜಾರಿ ಮಾಡಿದ್ದಾರೆ
ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿದ್ದಾಗಿ ನೋಟಿಸ್ ದೂರಲಾಗಿದೆ. ಆರೋಪಿ ಅತಿಥಿ ಶಿಕ್ಷಕ ತನ್ನ ಫೇಸ್ಬುಕ್ ಖಾತೆಯಲ್ಲಿ ಒಂದು ಧರ್ಮ ಹಾಗೂ ಪಕ್ಷದ ವಿರುದ್ಧ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ನೋಟಿಸ್ ಜಾರಿ ಮಾಡಲಾಗಿದೆ.