ಮಾಡೆಲ್ ಶಾಲೆಯ ಸ್ಮಾಟ್ ಬಾಲಕನ ಸಮಯ ಪ್ರಜ್ಞೆ
ಚಿಕ್ಕಮಗಳೂರು: ರಾತ್ರಿಯ ವೇಳೆಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾತನನ್ನು ಕರೆಯಲು ಹೋದ 12 ವರ್ಷದ ದ್ರುವ ಕಾಫಿ ತೋಟದೊಳಗೆ ನುಗ್ಗಿದಾಗ ಏನೋ ಕಡಿದಂತಾಯಿತು. ತಿರುಗಿ ನಿಂತು ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಗಿಡದ ಮೇಲೆದಿದ್ದು ಕಟ್ಟು ಹಾವು (ಕ್ರೈಟ್)…
ಸ್ಕಾಟ್ಸ್ ತರಗತಿಯಲ್ಲಿ ಕೇಳಿದ್ದ ಪ್ರಥಮ ಚಿಕಿತ್ಸೆ ಜ್ಞಾಪಕಕ್ಕೆ ಬಂತು, ಹಾವು ಕಚ್ಚಿದ ಕೈ ಗಾಯದ ಮೇಲ್ಬಾಗದಲ್ಲಿ ಗಟ್ಟಿಯಾಗಿ ಒಂದು ದಾರ ಕಟ್ಟಿ (ಟೂರ್ನಿಕೆಟ್) ಕೂಡಲೇ ಪೋಷಕರೊಂದಿಗೆ ನಗರದ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಈಗ ಸುಧಾರಿಸಿ ಕೊಳ್ಳುತ್ತಿದ್ದಾನೆ.
ಸ್ಕೌಟ್ ತರಗತಿಗಳಲ್ಲಿ ಕಲಿತ ಈ ಜ್ಞಾನದ ಉಪಯೋಗವನ್ನು ಪೋಷಕರು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.
ಹೊರಾಂಗಣದ ಬದುಕಿನಲ್ಲಿ ದಿನನಿತ್ಯ ಎದುರಿಸಬಹುದಾದ ಸಮಸ್ಯೆ ಮತ್ತು ವಿಪತ್ತುಗಳನ್ನು ಎದುರಿಸಲು ಹಾಗೂ ಮತ್ತೊಬ್ಬರಿಗೆ ಸಹಾಯ ಮಾಡಲು ಸಜ್ಜಾಗಿಸುವ ವಿಷಯಗಳಾದ ಪ್ರಥಮ ಚಿಕಿತ್ಸೆ, ದಿನಕ್ಕೊಂದು ಒಳ್ಳೆಯ ಕೆಲಸ, ಜಾಡು ಹಿಡಿಯುವುದು, ದೇಶಪ್ರೇಮ, ಅಪರಿಚಿತ ಪ್ರದೇಶದಲ್ಲಿ ದಾರಿ ತಪ್ಪುವುದು ಇಂತಹ ವಿದ್ಯೆಗಳು ಬಾಲಕರನ್ನು ಸೇವೆಗೆ ಪ್ರೇರೇಪಿಸುತ್ತದೆ.
ಪ್ರತಿ ತರಗತಿ ಹಾಗೂ ಪ್ರತಿ ಶಾಲೆಯಲ್ಲಿ ದ್ರುವನಂತಹ ವಿದ್ಯಾರ್ಥಿಗಳು ಇತರರಿಗೆ ಮಾರ್ಗದರ್ಶಿಯಾಗಿ ಬದುಕಲು ಸೈಟ್ ತರಗತಿಗಳು ಪ್ರೇರಕ ಶಕ್ತಿಗಳಾಗುತ್ತವೆ.