2026ಕ್ಕೆ ರಾಜ್ಯ ಸರಕಾರಿ ನೌಕರ ಹಾಗೂ ಕೇಂದ್ರ ಸರಕಾರಿ ನೌಕರರ ವೇತನ ಸರಿಸಮನಾಗಿರುತ್ತದೇಯಾ? ಇವತ್ತಿನ ಏಳನೇ ವೇತನ ಆಯೋಗದ ಮುಂದೆ ಸರಕಾರಿ ಸಂಘ ಮಂಡಿಸಿರುವ ಬೇಡಿಕೆಗಳೇನು?ಸಭೆಯ ಕುರಿತು ಸಿ.ಎಸ್.ಷಡಾಕ್ಷರಿಯರು ಏನು ಹೇಳಿದ್ದಾರೆ ನೋಡಿ..
ಬೆಂಗಳೂರ:
7ನೇ ವೇತನ ಆಯೋಗದ ಬಗ್ಗೆ ಮಾಹಿತಿ..
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರ ನೇತೃತ್ವದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಘದ ಅಭಿಪ್ರಾಯ/ಬೇಡಿಕೆ/ಮನವಿಯನ್ನು ಅತ್ಯಂತ ಸಮರ್ಥವಾಗಿ ಮಂಡಿಸಲಾಯಿತು.ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ಶ್ರೀ ಶ್ರೀನಿವಾಸ್,ಮಲ್ಲಿಕಾರ್ಜುನ ಬಳ್ಳಾರಿ, ವೆಂಕಟೇಶಯ್ಯ, ಬಸವರಾಜು, ಸುರೇಶ ಶೆಡಶ್ಯಾಳ,ನೆಲ್ಕುದ್ರಿ ಸದಾನಂದ, ಆರ್. ಮೋಹನ್ ಕುಮಾರ್, ಚೇತನ್ ರಾಜು, ವೇಣುಗೋಪಾಲ್, ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಬ್ಲಿಕ್ಟುಡೆಯೊಂದಿಗೆ ಮಾತನಾಡಿದ ಸಿ.ಎಸ್.ಷಡಾಕ್ಷರಿಯವರು, ಏಳನೇ ವೇತನ ಆಯೋಗದ ಅದ್ಯಕ್ಷರ ಮುಂದೆ ನಮ್ಮ ಬೇಡಿಕೆ/ಅಭಿಪ್ರಾಯವನ್ನು ಮಂಡಿಸಿದ್ದೇವೆ.
೧೭೨ ದಿಂದ ಸರಕಾರಿ ನೌಕರರಿಗೆ ಮಾನ್ಯತೆ ಬೆನ್ಫಿಟ್ ನೀಡಬೇಕು,
ಕನಿಷ್ಠ 40% ಪಿಟ್ಮೆಂಟ್ ನೀಡಬೇಕು.
ಸುಧಾರಣಾ ಕ್ರಮಗಳನ್ನು ಅನುಸರಿಸಬೇಕು.
ಕೇಂದ್ರ ಸರಕಾರಿ ನೌಕರರಿಗೆ ಸಮನಾದ ಡಿಎ ನೀಡಬೇಕು.
ಎಚ್ಆರ್ಎ ಹೆಚ್ಚಳ ಮಾಡಬೇಕು.
ಉಳಿದ ಭತ್ಯೆಗಳನ್ನು ಧ್ವಿಗಣಗೊಳಿಸಬೇಕು..
2026 ಕ್ಕೆ ಯಾವುದೇ ವೇತನ ಆಯೋಗ ಇರುವುದಿಲ್ಲ ಎಂಬ ಅಂಶವನ್ನು ವೇತನ ಆಯೋಗಕ್ಕೆ ತಿಳಿಸಿದ್ದೇವೆ..ಕೇಂದ್ರ ಸರಕಾರಿ ನೌಕರರ ಸರಿ ಸಮನಾದ ವೇತನವನ್ನು ನಮ್ಮ ಸರಕಾರಿ ನೌಕರರಿಗೂ ನೀಡಬೇಕೆಂಬ ಪ್ರಮುಖ ಅಂಶಗಳನ್ನು ವೇತನ ಆಯೋಗ ಮುಂದೆ ಮಂಡಿಸಿದ್ದೇವೆ..ಅವರು ಕೂಡ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ.. ಆಯೋಗ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡೊಣ ಎಂದರು..
ಇನ್ನೂ ಹಲವಾರು ವಿಷಯಗಳನ್ನು ವೇತನ ಆಯೋಗದ ಮುಂದೆ ಮಂಡಿಸಿದ್ದೇವೆ ಎಂದರು..