ಮೂರು ಜನ ಶಿಕ್ಷಕರನ್ನು ಥಳಿಸಿದ ವಿದ್ಯಾರ್ಥಿಗಳು!! ಕಲಿಸಿದ ಗುರುಗಳಿಗೆ ಹೀಗಾ ಮಾಡೋದು?
ಯಾರಿವರು ಶಿಕ್ಷಕರರು?? ಏನಿದು ಘಟನೆ ನೀವೆ ನೋಡಿ..
ವಡಗೇರಾ: ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮೂರು ಜನ ಶಿಕ್ಷಕರನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ..
ಘಟನೆಯ ವಿವರ: ಮೊರಾರ್ಜಿ ವಸತಿ ಶಾಲೆಯ ಮೂರು ಜನ ಶಿಕ್ಷಕರಲ್ಲಿ ಇಬ್ಬರು ಅತಿಥಿ ಶಿಕ್ಷಕರು.
ಇನ್ನೊಬ್ಬರನ್ನು ಕಾಯಂ ಮಾಡಲು ಕೋರಿ ಕೋರ್ಟ್ಗೆ ಮೊರೆ ಹೋಗಲಾಗಿತ್ತು. ಈ ಮೂರು ಜನ ಶಿಕ್ಷಕರು ವಸತಿ ಶಾಲೆಯ ವಿದ್ಯಾರ್ಥಿಗಳ ಜತೆ ಅಸಭ್ಯವಾಗಿ ವರ್ತಿಸುತಿದ್ದರು. ಕೆಟ್ಟ ಪದಗಳಿಂದ ನಿಂದಿಸುತ್ತಿದ್ದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಅನೇಕ ವೇಳೆ ಶಿಕ್ಷಕರಿಗೆ ತಿಳಿ ಹೇಳಿದರೂ ಸಹ ತಮ್ಮ ವರ್ತನೆ ಬದಲಾಗಿರಲಿಲ್ಲ.
ಇದರಿಂದ ಬೇಸತ್ತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ದೂರು ಕೊಡಲು ಯಾದಗಿರಿಗೆ ಬಂದಿದ್ದರು. ಆಗ ಗ್ರಾಮಸ್ಥರು ಹಾಗೂ ಉಳಿದ ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಿ ದೂರು ಕೊಡದಂತೆ ತಡೆದಿದ್ದರು ಎಂಬ ಮಾಹಿತಿಯನ್ನು ಗ್ರಾಮಸ್ಥರು ಹೊರ ಹಾಕಿದ್ದಾರೆ.
ಕಳೆದ 20 ದಿನಗಳ ಹಿಂದೆ ಮೂರು ಜನ ಶಿಕ್ಷಕರು ಮತ್ತೆ ಅಸಭ್ಯ ವರ್ತನೆ ತೋರಿದ ಕಾರಣ ರೊಚ್ಚಿಗೆದ್ದ ವಿದ್ಯಾರ್ಥಿಗಳು ಗ್ರಾಮಸ್ಥರ ಸಮ್ಮುಖದಲ್ಲಿಯೇ ಶಿಕ್ಷಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದರಲ್ಲಿ ಕಾಯಂಯಾತಿಗಾಗಿ ಕೋರ್ಟ್ಗೆ ಹೋಗಿದ್ದ ಶಿಕ್ಷಕ ಈ ಹಿಂದೆ ಇದೇ ರೀತಿಯ ವರ್ತನೆ ತೋರಿದ ಕಾರಣ ಅವರನ್ನು ಬೇರೆಡೆಗೆ ಎರವಲು ಸೇವೆಯ ಮೇಲೆ ಕಳುಹಿಸಿದ್ದರು.ಆದರೆ, ಕೆಲವು ತಿಂಗಳ ನಂತರ ಮತ್ತೆ ಇದೇ ವಸತಿ ಶಾಲೆಗೆ ಬಂದು ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
ಕೇವಲ ಪಾಠ ಸರಿಯಾಗಿ ಮಾಡದ ಕಾರಣ ವಿದ್ಯಾರ್ಥಿಗಳು ರೊಚ್ಚಿಗೆದ್ದು ಶಿಕ್ಷಕರನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಇದು ನೆಪ ಮಾತ್ರ. ಆದರೆ, ಇದರ ಹಿಂದೆ ಇನ್ನೇನೊ ಬೇರೆ ಇದೆ ಅದಕ್ಕಾಗಿ ವಸತಿ ಶಾಲೆಯ ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ನೈಜ ಮಾಹಿತಿಯನ್ನು ಪಡೆದಾಗ ಮಾತ್ರ ನಿಜ ಸಂಗತಿ ಹೋರ ಬರುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.