೫೦ ರ ಕರ್ನಾಟಕ ಸಂಭ್ರಮ ಕವನ (ಕನ್ನಡಾಂಬೆಯ ಅಂತರಾಳ)
೫೦ ರ ಕರ್ನಾಟಕ ಸಂಭ್ರಮ ಕವನ (ಕನ್ನಡಾಂಬೆಯ ಅಂತರಾಳ) ನಾನು ಕನ್ನಡದ ಅವ್ವ ಮಾತಾಡಕತ್ತೀನಿ ನನ್ನ ಮಡಿಲ ಕೂಸುಗಳಿರಾ, ಎತ್ತ ಹೊಂಟೀರಿ ಸ್ವಲ್ಪ ನಿಲ್ರಿ ನಿಂತ ಕೇಳ್ರಿ ನಿಮ್ಮವ್ವನ ಒಡಲಾಳದ ಸಂಕಟಾನ ಶತ ಶತಮಾನಗಳಿಂದಲೂ ಬಂಗಾರದ ಬಿಂದಿಗೆ ಹಿಡಿದು ಬಿಂಕದಲಿ ಬದುಕಿದಾಕಿ ನಾ ನನ್ನ ನೆಲ, ನನ್ನ ಜಲ, ನನ್ನ ಜನ ,ನನ್ನ ಮನ ಅಂತ ಬಂಗಾರದಂತ ಬದುಕನ್ನ ಕಟಗೊಂಡಾಕಿ ನಾ ಜ್ಞಾನಪೀಠಗಳೆಂಬ ಅಷ್ಟ ವಜ್ರಗಳ ಮೂಗಬಟ್ಟ ಇಟಗೊಂಡ ಮೆರದಾಕಿ ನಾ ಹಂಚಿ ಹರಿದ ಸೀರೆ ಬಿಡಿಸಿ…