ಹೃದಯ ಮಿಲನ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ ರೇಖಾಚಿತ್ರಗಳು ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ
ಹೃದಯ ಮಿಲನ ಹೃದಯ ಭಾವ ಮೂಡಿ ಬರಲು ಪ್ರೇಮ ಗೀತೆ ಪ್ರೇಮಿಯ ಒಡಲಾಳದ ಮಿಲನ ಗೀತೆ ಹೊಸ ಕನಸು ಕಾಣುತ ನಿನ್ನೊಲವಲಿ ಮೀಯುತ ಹೃದಯ ಬಡಿತ ಹೇಳಿದ ಪ್ರೇಮ ಪ್ರೇಮ ಪ್ರೇಮ ಹುಚ್ಚು ಮನದೊಳಗೆ ಮೂಡಿಹ ಪ್ರೀತಿ ಎರಡು ಹೃದಯ ಗಳ ಮಿಲನ ಮಂದಹಾಸ ನಲ್ಲೆಯ ಬಿಸಿಯಪ್ಪುಗೆಯ ಬಿಸಿ ಹೃದಯ ಬಯಸಿದ ಮಿಲನ ಬಂಧಿಯಾಗಿ ಸೇರಿ ಭಾವಬಂಧ ಮೂಡಿ ಬರುತಲಿ ಪ್ರೇಮ ಕಾವ್ಯ ಕನಸು ಸಾಕಾರಗೊಳಿಸಲು ಮಾತುಗಳು ಮೌನ ನೋಟದಲಿ ಬೆರೆತು ಮಾತು ಮೌನದಿ ಹೃದಯ ಮಿಲನ…