ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದಾರೆ..ಜನಿಸಿದ ತಿಂಗಳಿನಲ್ಲಿಯೇ ಮರಣ ಹೊಂದಿದ ನಟಿ. ಸಿಎಮ್ ಸೇರಿದಂತೆ ಗಣ್ಯ ಮಾನ್ಯರಿಂದ ಸಂತಾಪ ಸೂಚನೆ..ನಾಳೆ ಸಂಜೆ ಅವರ ತೋಟದ ಮನೆಯಲ್ಲಿ ಅಂತ್ಯಕ್ರಿಯೆ..
ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗೃಹದಲ್ಲದೇ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ಇಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. 1938 ಡಿಸೆಂಬರ್ 2ರಂದು ಜನಿಸಿದ್ದ ಲೀಲಾವತಿ ಅವರು ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಡಾ.ರಾಜಕುಮಾರ ಸೇರಿದಂತೆ 1950_60 ರ ದಶಕದಲ್ಲಿ ಭಾರಿ ಬೇಡಿಕೆ ನಟಿಯಾಗಿದ್ದರು.. 600 ಕ್ಕೂ…