ದೀಪಾವಳಿ ಪ್ರಯುಕ್ತ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ ಕುಣಿದು ಕುಣಿದು ಕೋಲು ಹಾಕಿದ ಬಾಲಕರು.ಜಾನಪದ ಹಾಡು ತಾಳ ವಾದ್ಯ ಮೇಳ ಹಿಮ್ಮೇಳಗಳ ಮಜಲು ನೀಡಿದ ಹಿರಿಯ ಕಲಾವಿದರು.ಜನ ಮನ ಸೂರೆಗೊಂಡ ಹುಲ್ಲಂಬಿ ಗ್ರಾಮದ ಕಲಾವಿದರು
ಹುಬ್ಬಳ್ಳಿ: ದೀಪಾವಳಿ ಹಬ್ಬಕ್ಕೆ ಶಾಲೆಗೆ ರಜೆಯಿದೆ ಎಂದು ಹಬ್ಬದ ಊಟ ಮಾಡಿ ಆಟವಾಡಿ ಸಮಯ ಕಳೆಯುವ ಇಂದಿನ ಯುಗದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲ್ಲಂಬಿ ಗ್ರಾಮದ ಹಿರಿಯ ಜಾನಪದ ಕಲಾವಿದರಾದ ಸಿದ್ದಣ್ಣ ತಂಬೂರ, ಶರಣಯ್ಯ ತಂಬೂರ, ಮಲ್ಲಪ್ಪ ಹುಲಕೊಪ್ಪ ,ಕಲ್ಲಪ್ಪ ಬಿಸರಳ್ಳಿ, ಶಿವಪ್ಪ ಬಿಸರಳ್ಳಿ, ಶಿವಾನಂದ ಬಿಸರಳ್ಳಿ, ಶಂಕ್ರಪ್ಪ ಬಿಸರಳ್ಳಿ, ಬಸಪ್ಪ ಹರಿಜನ, ಕಲ್ಮೇಶ ಹಾಗೂ ಹುಲ್ಲಂಬಿ ಗ್ರಾಮದ ಪ್ರಾಥಮಿಕ ಪ್ರೌಢ ಬಾಲಕರು ಶ್ರೀ ಸಿದ್ಧಾರೂಢ ಭಜನಾ ಸಂಘದಡಿಯಲ್ಲಿ ಕೋಲಾಟ ಮೇಳದೊಂದಿಗೆ ಆಗಮಿಸಿ ಶ್ರೀ ಸಿದ್ಧಾರೂಢರ…