ಸೋಮವಾರ ಗುರು ಪೂರ್ಣಿಮಾ ತನ್ನಿಮಿತ್ತ ವೈ. ಬಿ. ಕಡಕೋಳ ಶಿಕ್ಷಕ ಸಂಪನ್ಮೂಲ ವ್ಯಕ್ತಿ ಬರೆದ ಗುರುವಿನ ಮಹತ್ವದ ಕುರಿತ ಬರಹ
ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ. “ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ.ಭಗವಂತನ ಕರುಣೆ ಗುರುಗಳ ಮೂಲಕ ಹರಿದು ಬರುತ್ತದೆ.ಗಾಳಿಪಟವು ಸೂತ್ರವಿಲ್ಲದೇ ಹೇಗೆ ಸರಿಯಾಗಿ ಹಾರಲಾಗದೋ .ಹಾಗೆಯೇ ಗುರುವಿನ ಮಾರ್ಗದರ್ಶನವಿಲ್ಲದೇ ನಮ್ಮ ಬದುಕಿನಲ್ಲಿ ನಡೆಯಲಾಗದು.ಮನುಷ್ಯನಿಗೆ ಗುರುವನ್ನು ಬಿಟ್ಟು ಬೇರೆ ಗತಿಯಿಲ್ಲ. ಅಂದರೆ ಮುಕ್ತಿ ಇಲ್ಲ.ಮುಕ್ತಿಯನ್ನು ಹೊಂದುವುದೇ ಮಾನವ ಜನ್ಮದ ಸಾಫಲ್ಯವು.ಇಂಥಹ ಒಂದು ಸಾರ್ಥಕತೆಯನ್ನು ಹೊಂದಬೇಕಾದರೆ ಮುಖ್ಯವಾಗಿ ಗುರುವನ್ನು ಆಶ್ರಯಿಸಬೇಕು.ಹಾಗಾದರೆ ಗುರು ಏನು ಮಾಡುವನು ಎಂದರೆ ಮಾನವರಾದ ನಮ್ಮನ್ನು ದೇವಮಾನವರನ್ನಾಗಿ ಮಾಡುವರು.ಅವರು ನಮ್ಮ ಕಣ್ಣು,ಕಿವಿ.ಮನಸ್ಸುಗಳಿಗೆ ಆಗಾಗ ಕವಿಯುವ ಪೊರೆಯನ್ನು ತಮ್ಮ ಜ್ಞಾನಾಮೃತ…