ಸುರಿವ ಮಳೆಗೆ ಧುಮ್ಮಿಕ್ಕುವ ವರವಿ ಕೊಳ್ಳ ಕುರಿತು ಶಿಕ್ಷಕ ಸಾಹಿತಿ ವೈ. ಬಿ ಕಡಕೋಳ ರ ಈ ಸ್ಥಳದ ಪರಿಚಯಾತ್ಮಕ ಬರಹ
ತಪಸ್ವಿಗಳ ತಾಣ ವರವಿಕೊಳ್ಳ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಹತ್ತಿರ ಐದು ಕಿ.ಮೀ. ಅಂತರದಲ್ಲಿ ಎಕ್ಕೇರಿ ಎಂಬ ಗ್ರಾಮವಿದೆ. ಈ ಗ್ರಾಮದ ಅಧಿದೇವತೆ ಕರೆಮ್ಮಾದೇವಿ’ಈ ದೇವಾಲಯಕ್ಕೆ ಮುಂಚೆ ರಸ್ತೆ ಬದಿ `ವರವಿಕೊಳ್ಳಕ್ಕೆ ಮಾರ್ಗ” ಎಂಬ ನಾಮಫಲಕ ಕಾಣುವುದು. ಮುನವಳ್ಳಿ ನರಗುಂದ ಮಾರ್ಗದಲ್ಲಿ ಸಾಕಷ್ಟು ವಾಹನ ಸೌಕರ‍್ಯವಿದೆ. “ವರವಿಕೊಳ್ಳ” ಕ್ರಾಸ್ ನಿಲುಗಡೆ ಅಂತಾ ಹೇಳಿದರೆ, ಅಲ್ಲಿ ಇಳಿಯಬಹುದು. ಆ ಮಾರ್ಗ ಕಚ್ಚಾ ರಸ್ತೆಯಾಗಿದ್ದು ಇತ್ತೀಚಿನ ವರ್ಷಗಳಲ್ಲಿ ರಸ್ತೆ ನಿರ್ಮಾಣ ಗೊಂಡು ಕಾರು ಬೈಕ್ ಪ್ರಯಾಣ ವರವಿಕೊಳ್ಳ ದವರೆಗೂ…