ಸಿ.ಎಸ್.ಷಡಾಕ್ಷರಿಯವರ ಕಿರುಕುಳಕ್ಕೆ ಸರಕಾರಿ ನೌಕರ ಬಲಿ? ನೌಕರರ ಸಂಘದ ರಾಜ್ಯಾದ್ಯಕ್ಷ ಹಾಗೂ ಶಿಕ್ಷಣ ಸಚಿವ ಆಪ್ತ ಕಾರ್ಯದರ್ಶಿಯವರ ಮೆಲೇ ನೇರ ಆರೋಪ: ಸರಕಾರಿ ನೌಕರ ನಾಪತ್ತೆ
ನೌಕರಿಯಲ್ಲಿ ಹಿಂಬಡ್ತಿ ಮತ್ತು ಕಳೆದ ಆರು ತಿಂಗಳಿನಿಂದ ವೇತನ ಆಗದ ಕಾರಣ ಮನನೊಂದು ಸರ್ಕಾರಿ ನೌಕರರೋರ್ವರು ನಾಪತ್ತೆಯಾಗಿರುವ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ: ನೌಕರಿಯಲ್ಲಿ ಹಿಂಬಡ್ತಿ ಅನುಭವಿಸಿ, ಕಳೆದ 6 ತಿಂಗಳಿನಿಂದ ವೇತನವೂ ಸಿಗದ ಕಾರಣ ಸರ್ಕಾರಿ ನೌಕರರೋರ್ವರು ನಾಪತ್ತೆಯಾಗಿದ್ದಾರೆ ಎನ್ನಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಸೋಮಯ್ಯ ಲೇಔಟ್ ನಿವಾಸಿ ಪ್ರಭಾಕರ್ ಕಾಣೆಯಾಗಿದ್ದಾರೆ. ಪ್ರಭಾಕರ್ ಅವರ ಪತ್ನಿ ದೀಪ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಭಾಕರ್…