ಸವದತ್ತಿ ತಾಲೂಕು ಶಿಕ್ಷಕರ ದಿನಾಚರಣೆ ವರದಿ
ಮಕ್ಕಳಿಗೆ ಬೋಧನೆ ಮಾಡುವುದು ಸಂತೋಷದ ಕ್ಷಣ ಮಲ್ಲಿಕಾರ್ಜುನ ಹೆಗ್ಗನ್ನವರ ಸವದತ್ತಿ : “ ಮನುಷ್ಯನ ಪ್ರಗತಿ ವಿಕಾಸಕ್ಕೆ ಶಿಕ್ಷಣ ಮೂಲಭೂತ ಅಗತ್ಯತೆಗಳಲ್ಲೊಂದು.ಶಿಕ್ಷಕ ವೃತ್ತಿ ಬಹಳ ಅಮೂಲ್ಯವಾದದ್ದು ನನಗೆ ಬೋಧಿಸುವುದೆಂದರೆ ಬಹಳ ಸಂತೋಷ. ಮಕ್ಕಳ ಮಟ್ಟಕ್ಕಿಳಿದು ಬೋಧಿಸುವ ಜೊತೆಗೆ ಪರಿಣಾಮಕಾರಿ ಬೋಧನೆ ಮಕ್ಕಳ ಮೇಲೆ ಪರಿಣಾಮಕಾರಿಯಾಗುತ್ತದೆ.ನಾನು ಶಿಕ್ಷಕನಾಗಿ,ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರಿಂದಲೇ ತಹಶೀಲ್ದಾರ್ ಹುದ್ದೆಗೆ ಬರಲು ಅನುಕೂಲವಾಯಿತು.ಇಂದಿಗೂ ಮಕ್ಕಳಿಗೆ ಬೋಧನೆ ಮಾಡುವುದೆಂದರೆ ನನಗೆ ಇಷ್ಟ. ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧಕರಾಗಿ ಕಾರ್ಯ ಮಾಡಿದರೆ ಮಕ್ಕಳಲ್ಲಿ ಉತ್ತಮ…