ಸವದತ್ತಿ ತಾಲೂಕಿನ ಮುನವಳ್ಳಿ ಯಲ್ಲಿದೆ ಅಪರೂಪದ ಕೋದಂಡರಾಮ ದೇವಾಲಯ ಇದರೊಂದಿಗೆ ಮುನವಳ್ಳಿ ಯ ಅಪರೂಪದ ಪ್ರಾಣದೇವರುಗಳು ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ವಿಶಿಷ್ಟ ಬರಹ
ಮುನವಳ್ಳಿಯ ಅಪರೂಪದ ಪ್ರಾಣದೇವರುಗಳು ನಾಳೆ ಅಯೋಧ್ಯಯಲ್ಲಿ ರಾಮಮಂದಿರದ ಲೋಕಾರ್ಪಣೆ ಜರುಗುತ್ತಿರುವ ಪ್ರಯುಕ್ತ ಮುನವಳ್ಳಿಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಜರಗುತ್ತಿರುವುದು ಈ ಹಿನ್ನಲೆಯಲ್ಲಿ ಹನುಮಂತನ ದೇವಾಲಯಗಳ ಒಂದು ಅವಲೋಕನ ಈ ಬರಹದ ಉದ್ದೇಶ. ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ.ಹನುಮಂತನು ಕಿಷ್ಕಿಂದೆಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಅಲ್ಲಿಗೆ ಬಂದಾಗ ತನ್ನ ಸ್ವಾಮಿಯೊಡನೆ ಬೇಟಿಯಾಗುತ್ತದೆ. ಅಲ್ಲಿಂದ ಮುಂದೆ ರಾಯಾಯಣದ ಅಂತ್ಯದವರೆಗೂ ಹನುಮಂತನ ಪಾತ್ರ ತುಂಬ ಮಹತ್ವವನ್ನು ಪಡೆಯುತ್ತ ಸಾಗುವುದನ್ನು ನಾವು ಕಾಣುತ್ತೇವೆ.ರಾಮಾಯಣದ ಅಂಜನೇಯನ ಪ್ರವೇಶದ…