ಸವದತ್ತಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮೋಹನ ದಂಡಿನ ಅಧಿಕಾರ ಸ್ವೀಕರಿಸಿದ ಕ್ಷಣಗಳ ವರದಿ
ಮನೋ ವೈಜ್ಞಾನಿಕ ಮನಸ್ಥಿತಿಯ ಸಹೃದಯ ವ್ಯಕ್ತಿಗಳು ಮೋಹನ್ ದಂಡಿನ ಮಲ್ಲಿಕಾರ್ಜುನ ಹೆಗ್ಗನ್ನವರ.. ಸವದತ್ತಿ ಃ “ಶಿಕ್ಷಣ ಕ್ಷೇತ್ರದಲ್ಲಿ ಗುರು ಶಿಷ್ಯರ ಅಪೂರ್ವ ಮಿಲನ ಇಂದು ಸವದತ್ತಿ ತಾಲೂಕಿನಲ್ಲಿ ಆಗಿದೆ.ಮೋಹನ ದಂಡಿನ ಗುರುಗಳು ನಮಗೆ ಟಿ.ಸಿ.ಎಚ್.ಸಂದರ್ಭದಲ್ಲಿ ಮನೋವಿಜ್ಞಾನ ಬೋಧಿಸುತ್ತಿದ್ದರು.ಅವರ ವಿದ್ಯಾರ್ಥಿಯಾದ ನಾನಿಂದು ಸವದತ್ತಿ ತಾಲೂಕಿನ ದಂಡಾಧಿಕಾರಿಯಾಗಿ ಆಗಮಿಸಿದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನನ್ನ ಗುರುಗಳು ಬಂದಿದ್ದು ನಿಜಕ್ಕೂ ಒಂದು ರೀತಿಯ ಅಪೂರ್ವ ಸಂಗಮ.ಕಂದಾಯ ಮತ್ತು ಶಿಕ್ಷಣ ಇಲಾಖೆಗಳ ಸಮ್ಮಿಳಿತದ ಮೂಲಕ ಇಲಾಖೆಗಳ ಚಟುವಟಕೆಗಳು ಜರುಗುತ್ತವೆ.ಒಂದಕ್ಕೊಂದು ಪೂರಕ ವಾತಾವರಣದಲ್ಲಿ ಮನೋವೈಜ್ಞಾನಿಕ…