ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಕೆನರಾ ಬ್ಯಾಂಕಿನ ಸಿಎಸ್ಆರ್ ಅನುದಾನದಡಿ ಕೊಡ ಮಾಡಿದ ಶಾಲಾ ಸ್ಮಾರ್ಟ್ ಕ್ಲಾಸ್ ಹಾಗೂ ಟಿವಿ ಲ್ಯಾಪ್ಟಾಪ್ ಸಿಸಿ ಕ್ಯಾಮೆರಾದಂತಹ ಉಪಕರಣಗಳ ಉದ್ಘಾಟನೆ
ಶಿರಹಟ್ಟಿ: ಕಲಿತ ಶಾಲೆ ಕಲಿಸಿದ ಗುರುಗಳ ಸ್ಮರಣೆ ಸದಾ ಕಾಲ ಇರಬೇಕು ಕಲಿತ ಶಾಲೆಯ ಋಣ ತೀರಿಸುವ ಕೆಲಸ ನಮ್ಮಿಂದ ಆಗಬೇಕು ಅಂದಾಗ ಶಾಲೆಯು ಒಂದು ಜ್ಞಾನ ದೇಗುಲ ಎಂಬ ಮನೋಭಾವ ಮೂಡುತ್ತದೆ. ಎಂದು ಕೆನರಾ ಬ್ಯಾಂಕ್ ವಿಭಾಗಿಯ ವ್ಯವಸ್ಥಾಪಕ ಗಣೇಶ್ ಬಸ್ತವಾಡಕರ್ ಅಭಿಪ್ರಾಯಪಟ್ಟರು. ಅವರು ಬೆಳ್ಳಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಕೆನರಾ ಬ್ಯಾಂಕಿನ ಸಿಎಸ್ಆರ್ ಅನುದಾನದಡಿ ಕೊಡ ಮಾಡಿದ ಶಾಲಾ ಸ್ಮಾರ್ಟ್ ಕ್ಲಾಸ್ ಹಾಗೂ ಟಿವಿ ಲ್ಯಾಪ್ಟಾಪ್ ಸಿಸಿ ಕ್ಯಾಮೆರಾದಂತಹ…