ಸಮಾಜ ಸೇವೆ ಹಾಗೂ ಸಂಘಟನೆ ಯಲ್ಲಿ ತೊಡಗಿಕೊಂಡ ಮಹೇಶ್ ಹುಬ್ಬಳ್ಳಿ ಅವರ ಜನ್ಮದಿನ ಅಂಗವಾಗಿ ಕಲಬುರಗಿಯ ಶಿಕ್ಷಕಿ ನಂದಿನಿ ಸನಬಾಳ್ ಅವರ ಪರಿಚಯಾತ್ಮಕ ಬರಹ
ಸಮಾಜ ಸೇವೆ, ಹೋರಾಟಗಾರ, ಮಹೇಶ ಹುಬ್ಬಳ್ಳಿ ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ.ಅಂಥಹ ಸಂಘಟನಾ ಚತುರ ಹಾಗೂ ತನ್ನನ್ನು ತಾನು ಸಮಾಜ ಸೇವೆಗೆ ತೊಡಗಿಸಿಕೊಳ್ಳುವ ಸಮಾಜ ಸೇವಕರಲ್ಲಿ ಅಪರೂಪದ ಸಮಾಜ ಸೇವಕರಾದ ಶ್ರೀ ಮಹೇಶ ಹುಬ್ಬಳ್ಳಿ ಅವರ ಪರಿಚಯ ನಾನಿಂದು ಮಾಡಹೊರಟಿರುವೆ. ಇವರ ಜನ್ಮದಿನ ನವೆಂಬರ್ 7.ಇವರು ಯುವ ಜನತೆಯ ಆಶಾ ಕಿರಣ ಎಂದರೆ ತಪ್ಪಾಗಲಿಕ್ಕಿಲ್ಲ. ಶ್ರೀಮಂತ ಮನೆತನದ ಅಪರೂಪದ ಮಗನಾಗಿ ಹುಟ್ಟಿದ ಶ್ರೀ ಮಹೇಶ್…