ಶ್ರಾವಣ ಮಾಸದ ಅಂಗವಾಗಿ ಜಾಲಿಕಟ್ಟೆ ಬಸವೇಶ್ವರ ದೇವಾಲಯ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಬರಹ
ಜಾಲಿಕಟ್ಟೆ ಬಸವೇಶ್ವರ ದೇವಾಲಯ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಾಲಿಕಟ್ಟೆ ಸವದತ್ತಿ ತಾಲೂಕಾ ಕ್ಷೇತ್ರದಿಂದ ೨೮ ಕಿ.ಮೀ., ಯರಗಟ್ಟಿ ಹಾಗೂ ಮುನವಳ್ಳಿಗಳಿಂದ ೧೨ ಕಿ.ಮೀ.ಅಂತರದಲ್ಲಿರುವ ಪುಟ್ಟ ಗ್ರಾಮ. ಈ ಗ್ರಾಮದ ಬಸವೇಶ್ವರ ದೇವಾಲಯ ಪ್ರಸಿದ್ಧವಾಗಿದ್ದು ಗ್ರಾಮದ ಅಷ್ಟೇ ಅಲ್ಲ ತಾಲೂಕಿನ ಜಿಲ್ಲೆಯ ಅನೇಕ ಸ್ಥಳಗಳ ಭಕ್ತಜನರ ಆರಾಧ್ಯ ದೈವ ಕೂಡ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿ ಜಾತ್ರೆ ಜರುಗುತ್ತದೆ. ಕಪ್ಪು ಕಲ್ಲಿನಲ್ಲಿ ಸುಂದರವಾದ ಕೆತ್ತನೆಯುಳ್ಳ ಎತ್ತರವಾದ ಕುಳಿತ ನಂದಿ’ಯೇ ಶ್ರೀ ಬಸವೇಶ್ವರ. ಇದು ಹಲವು ದೇವಾಲಯಗಳನ್ನು…