ಶಿವಾಜಿ ಮಹಾರಾಜರ ಮೂರ್ತಿ ಮರು ಪ್ರತಿಷ್ಠಾಪನೆ ಮಾಡುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಭಗತ್ ಸಿಂಗ ಸೇವಾ ಸಂಘದಿಂದ ಮನವಿ ಸಲ್ಲಿಕೆ..
ಭಗತಸಿಂಗ್ ಸೇವಾ ಸಂಘದ ವತಿಯಿಂದ ಹುಬ್ಬಳ್ಳಿಯ ಪಾಲಿಕೆಯ ಚಿಟಗುಪ್ಪಿ ಉದ್ಯಾನವನದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕಳಪೆ ಕಾಮಗಾರಿಯಿಂದ ಕುಸಿದು 04 ವರ್ಷಗಳೇ ಆದರೂ ಇಲ್ಲಿಯವರಿಗೂ ಪುರ್ನನಿರ್ಮಾಣ ಮಾಡದೇ ಇರುವುದನ್ನು ಖಂಡಿಸಿ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಅವರಿಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾದ ದಿನವೇ 04 ನೇ ಮನವಿಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಅನೇಕ ಬಾರಿ ಮನವಿ ಸಲ್ಲಿಸಿದರು ಕೇವಲ ಹಾರೈಕೆಯ ಉತ್ತರವನ್ನು ನೀಡುತ್ತ ಬಂದಿರುವ…