ಶಿಕ್ಷಕಿ ಮೀನಾಕ್ಷಿ ಸೂಡಿಯವರ ಕವನ “ಎವ್ವಾ ನೀ ನನ್ನ ಜೀವ ಈ ಕವನಕ್ಕೆ ರೇಖಾ ಚಿತ್ರಗಳನ್ನು ಅಣ್ಣಿಗೇರಿ ಯ ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ನೀಡಿರುವರು
ವಿಶ್ವ ತಾಯಂದಿರ ದಿನಕ್ಕಾಗಿ ನನ್ನ ಅವ್ವನಿಗೊಂದು ಕವನ ನಮನ 💕🥰💕 (ನನ್ನ ಹೆತ್ತವ್ವನ ಪಾದಗಳಿಗೆ ಈ ಕವನ ಅರ್ಪಣೆ) 🌹ಎವ್ವಾ ನೀ ನನ್ನ ಜೀವ 🌹 ಎವ್ವ ಬೇ… ನಿನ್ನ ಎನಂತ ವರ್ಣಿಸಲಿ??? ಪದವಿ-ಪದಕ-ಪದ ಮೀರಿದ ಪುಣ್ಯಕೋಟಿ ನೀನವ್ವ ನಿನ್ನ ಪ್ರೀತಿನ ಉಸಿರವ್ವ ಈ ನನ್ನ ಜನುಮಕ ನಿನ ಸೇವೆಯಾ ನೀಡು ನನ್ನುಸಿರ ಕೊನೆತನಕ ಬದುಕಿನುದ್ದಕ್ಕೂ ಬರೀ ನೋವುಂಡು ಬದುಕಿದಾಕಿ ಮಕ್ಕಳ ಮಾರಿ ನೋಡಿ ಆಸೆನಾ ಅರಳಿಸಿಕೊಂಡಾಕಿ ಎದ್ಯಾಗ ಸುಡೋ ಬೆಂಕಿ ಇಟಗೊಂಡ ವಿಧಿಗೆ ಸೆಡ್ಡು ಹೊಡೆದು…