ಶಿಕ್ಷಕರ ಬೀಳ್ಕೊಡುಗೆ ಮಳೆರಾಯನ ಅಡ್ಡಿ ಆದರೂ ಹಠಬಿಡದ ವಿದ್ಯಾರ್ಥಿ ಪಡೆ… ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಅಳುತ್ತಲೇ ತಮ್ಮ ನೆಚ್ಚಿನ ಶಿಕ್ಷಕರನ್ನು ಬಿಳ್ಕೊಟ್ಟರು.ಬಾವುಕ ಕ್ಷಣಗಳಿಗೆ ಸಾಕ್ಷಿಯಾದ ಶಾಲಾ ಆವರಣ
ಶಿಕ್ಷಕರ ಬೀಳ್ಕೊಡುಗೆ ಮಳೆರಾಯನ ಅಡ್ಡಿ ಆದರೂ ಹಠಬಿಡದ ವಿದ್ಯಾರ್ಥಿ ಪಡೆ… ಸುರೇಶ ಸಿ ಆರ್ ಮುಖ್ಯಗುರುಗಳು ಇವರು ಸ ಕಿ ಪ್ರಾ ಶಾಲೆ ಕೋಟೆಹಾಳು ಶಾಲೆಯಲ್ಲಿ 16 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಇವರ ಬೀಳ್ಕೊಡುಗೆ ಸಮಾರಂಭವನ್ನು ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹಮ್ಮಿಕೊಂಡಿದ್ದರು. ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಇರುವುದರಿಂದ ಈ ದಿನವೇ ಸುರೇಶ್ ಸಿ ಆರ್ ರವರನ್ನು ಬೀಳ್ಕೊಡ ಬೇಕೆಂದು ತೀರ್ಮಾನಿಸಿ ಅದ್ದೂರಿಯಾಗಿ ಬೀಳ್ಕೊಟ್ಟರು….