ಶಿಕ್ಷಕನನ್ನು ಅಮಾನತ್ ಮಾಡಿ ಆದೇಶ ಮಾಡಿದ್ರು ಡಿಡಿಪಿಐ..
ಶಿಕ್ಷಕನನ್ನು ಅಮಾನತ್ ಮಾಡಿ ಆದೇಶ ಮಾಡಿದ್ರು ಡಿಡಿಪಿಐ.. ತುಮಕೂರ: ಶಿಕ್ಷಕಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಹೊಳಲುಗುಂದ ಸರ್ಕಾರಿ ಪ್ರೌಢಶಾಲೆ ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ.. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊಳಲುಗುಂದ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಗೋಪಾಲ್ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಶಿಕ್ಷಕನ ಕಿರುಕುಳದ ಬಗ್ಗೆ ಶಿಕ್ಷಕಿ ಡಿಡಿಪಿಐಗೆ ದೂರು ನೀಡಿದ್ದರು. ಶಿಕ್ಷಕ ಗೋಪಾಲ್ ನನ್ನು ಅಮಾನತು ಮಾಡಿ ಡಿಡಿಪಿಐ ನಂಜಯ್ಯ ಆದೇಶ ಹೊರಡಿಸಿದ್ದಾರೆ.