ಶಾಲೆಗೆ ಗೈರಾದ ಶಿಕ್ಷಕನಿಗೂ ಸಂಬಳ.. ಒಂದಲ್ಲ,ಎರಡಲ್ಲಾ… ಬರೊಬ್ಬರಿ 11 ತಿಂಗಳಿನಿಂದ ಸಂಬಳ ಪಡೆಯುತ್ತಿದ್ದ ಶಿಕ್ಷಕ…. ಮೂವರು ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಮಾಡಿದ ಶಿಕ್ಷಣ ಇಲಾಖೆ..
ಸತತವಾಗಿ 11 ತಿಂಗಳ ಶಾಲೆಗೆ ಗೈರಾಗಿದ್ದರು ಕೂಡಾ ಶಿಕ್ಷಕರೊಬ್ಬರಿಗೆ ಸಂಬಳ ನೀಡಿದ ಘಟನೆ ಕಲಬುರಗಿ ಯಲ್ಲಿ ಕಂಡು ಬಂದಿದೆ.ಹೌದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥ ಮಿಕ ಶಾಲೆಯ ಶಿಕ್ಷಕ ರೇಣುಕಾಚಾರ್ಯ ಸತತ 11 ತಿಂಗಳು ಶಾಲೆಗೆ ಗೈರಾಗಿದ್ದಾರೆ. ಇವರು ಶಾಲೆಗೆ ಬರದಿದ್ದರೂ ಕೂಡಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಳವನ್ನು ನೀಡಿ ದ್ದಾರೆ. ಇವರು ಮಾಡಿದ ಎಡವಟ್ಟಿನಿಂದ ಕೆಲವೊಮ್ಮೆ ಪ್ರಮಾದಗಳು ನಡೆಯುತ್ತವೆ ಎಂಬುದಕ್ಕೆ ಈ ಒಂದು ಪ್ರಕರಣವೇ ಸಾಕ್ಷಿ ಯಾಗಿದೆ….