ಶನಿವಾರ ಮುನವಳ್ಳಿ ಸೋಮಶೇಖರ ಮಠದಲ್ಲಿ ಜರುಗಿದ ಪರಮಪೂಜ್ಯ ಶ್ರೀ. ಮ. ನಿ. ಪ್ರ. ಸ್ವ ಮುರುಘೇಂದ್ರ ಮಹಾಸ್ವಾಮಿಗಳ 49 ನೆಯ ಜನ್ಮದಿನೋತ್ಸವ ಅಂಗವಾಗಿ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಲೇಖನ
ಮುನಿಪುರಾದೀಶ ಮುರುಘೇಂದ್ರ ಮಹಾಸ್ವಾಮಿಗಳು ಶನಿವಾರ ಮುನವಳ್ಳಿ ಶ್ರೀ ಸೋಮಶೇಖರ ಮಠದಲ್ಲಿ ಪರಮಪೂಜ್ಯ ಶ್ರೀ ಮುರುಘೇಂದ್ರ ಸ್ವಾಮೀಜಿಯವರ ಜನ್ಮ ದಿನದ ಸಂಭ್ರಮ ಈ ಸಂಭ್ರಮ ಮುನವಳ್ಳಿ ಹಾಗೂ ಸುತ್ತ ಮುತ್ತಲಿನ ಜನತೆಯ ಅಭಿಮಾನ ಮತ್ತಿ ಭಕ್ತಿಯ ಸಡಗರವೋ ಸಡಗರ. ಪೂಜ್ಯರ ಹುಟ್ಟು ಹಬ್ಬವೆಂದರೆ ಅದು ವೈಶಿಷ್ಟ್ಯಪೂರ್ಣ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮುನ್ನುಡಿ ಕೂಡ. ಶನಿವಾರ ಬೆಳಿಗ್ಗೆ ೧೦.೩೦ ಕ್ಕೆ ಶ್ರೀಮಠದಲ್ಲಿ ಗುರುವಂದನೆ ಕಾರ್ಯಕ್ರಮ ಜರುಗಿತು.ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಭಕ್ತಿಯ ಗುರುವಂದನೆ ಈ…