ವೈ. ಬಿ. ಕಡಕೋಳ ಅವರ ಭಾವನಾತ್ಮಕ ಕವನ ನೀ ನನಗೆ ನಾ ನಿನಗೆ. ಈ ಕವನಕ್ಕೆ ರೇಖಾಚಿತ್ರವನ್ನು ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಚಿತ್ರ ಗಳನ್ನು ಒದಗಿಸಿರುವರು
ನಾ ನಿನಗೆ- ನೀ ನನಗೆ ಎಲ್ಲೋ ಹುಟ್ಟಿ ಎಲ್ಲಿಯೋ ಹರಿದು ನದಿ ಸಾಗರವ ಸೇರುವ ಹಾಗೆ ಎಲ್ಲಿಯೋ ಇರುವ ನಾವು ಪ್ರೀತಿಯ ಅಲೆಯಲ್ಲಿ ಸೇರಿ ಭಾವನಾತ್ಮಕ ಬಂಧದಲ್ಲಿ ಜೀವನ ಕಳೆಯುತಿರುವೆವು ನಿನಗೆ ಅಲ್ಲಿ ನೋವಾದರೆ ನನಗೆ ಇಲ್ಲಿ ವ್ಯಥೆ ಹೇಗೆ ನಿನ್ನ ಸಲುಹಲಿ ಚಿಂತೆ ಕಾಡುತಲಿ ನೋವ ಅನುಭವಿಸುತಿರುವೆ ಹೃದಯವು ಅಷ್ಟು ಹಚ್ಚಿಕೊಂಡಿದೆ ನಿನ್ನ ನಾನು ನನ್ನದೆಂಬ ಭಾವಗಳ ಸೆಳೆತ ಬಂಧಿಸಿಹುದು ಪ್ರೀತಿಯಲಿ ನಮ್ಮನು ಬಿಟ್ಟೆನೆಂದರೂ ಬಿಡದೀ ಬೇಗುದಿಯ ಛಾಯೆ. ಪ್ರೀತಿ ಯೆಂದರೆ ಹೀಗೇನೇ ಬಿಡದ ನಂಟನು…