ಮಕರ ಸಂಕ್ರಾಂತಿ
ಮಕರ ಸಂಕ್ರಾಂತಿ ಸೂರ್ಯನ ಪರಿಭ್ರಮಣದೊಳು ಭೂತಾಯಿಯ ಮಡಿಲು ನವಕಾಂತಿಯ ಯುಗವನು ಕಾಣುತಿರೆ ಋತು ಚಕ್ರದೊಳು ವಸಂತನ ಆಗಮನ ನವಕಳೆಯೊಳು ಪ್ರಕೃತಿ ಸಂಕ್ರಾಂತಿಯ ಆಗಮನ ಎಳ್ಳು-ಬೆಲ್ಲವ ಮೆದ್ದು ಒಳ್ಳೆಯ ನುಡಿಗಳನಾಡುತ ಸಕಲರೂ ಕೂಡಿ ಸಡಗರದಿ ದಿನವನು ಕಳೆಯೋಣ ವರ್ಷವಿಡೀ ಬದುಕಲಿ ಸುಖ-ಶಾಂತಿ ನೆಮ್ಮದಿಯ ಬಯಸುತ ಬದುಕಿನ ಸಂತಸ ಮೆರೆಯೋಣ ಹೊಸದಿಗಂತದಿ ಮೂಡಲಿ ಆಶಾಭಾವ ಹೊಸತನದಿ ಬದುಕು ಹೊರಹೊಮ್ಮಲಿ ನವನವೋಲ್ಲಾಸ ತರಲಿ ದಿನದಿನವು ಸಂಕ್ರಾಂತಿಯ ಸವಿಯನರಸುತ ಮುಂಬರುವ ಹಬ್ಬಗಳ ಕರೆಯೋಣ ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ ಎನುತ ದೇವರಲಿ ಪ್ರಾರ್ಥಿಸೋಣ…