ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಕಟಿಂಗ್ ಮಾಡಬೇಡಿ: ಶಿಕ್ಷಕರೊಬ್ಬರು ಸವಿತಾ ಸಮಾಜಕ್ಕೆ ಬರೆದ ಪತ್ರ ವೈರಲ್…
ಶಾಲಾ ವಿದ್ಯಾರ್ಥಿಗಳು ಖ್ಯಾತ ನಟ ಕಿಚ್ಚ ಸುದೀಪ್ ಅವರು ತಮ್ಮ ‘ಹೆಬ್ಬುಲಿ’ ಚಿತ್ರದಲ್ಲಿ ಮಾಡಿಸಿಕೊಂಡಿದ್ದ ಕೇಶ ವಿನ್ಯಾಸವನ್ನು ಮಾಡಿಸಿಕೊಂಡು ಶಾಲೆಗೆ ಬರುತ್ತಿರುವ ಕಾರಣ ಶಿಕ್ಷಕರೊಬ್ಬರು ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ನಗರದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂ. ಶಾಂತರಾಜು ಅವರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಚಶೆಟ್ಟಿಯವರಿಗೆ ಪತ್ರ ಬರೆದು ಶಾಲಾ ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಕಟಿಂಗ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ…