ಕಲಘಟಗಿ: ಬೇಡ್ತಿ ನಾಲಾ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸಿ, ಕೆರೆಗಳಿಗೆ ನೀರು ತುಂಬಿಸಿ ಎಂದು ಸಚಿವ ಸಂತೋಷ್ ಲಾಡ್ ಗುತ್ತಿಗೆ ಪಡೆದ ಅಮೃತ್ ಕನ್ಸ್ಟ್ರಕ್ಷನ್ ಕಂಪನಿವರಿಗೆ ಹಾಗೂ ಇಂಜನಿಯರುಗಳಿಗೆ ಸೂಚಿಸಿದರು.
ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ತಮ್ಮ ಅಮೃತ ನಿವಾಸದಲ್ಲಿ ಮಂಗಳವಾರ ಬೇಡ್ತಿ ನಾಲಾ ಕುರಿತು ರೈತರ ಜೊತೆ ಸಂವಾದ ಕಾರ್ಯಕ್ರಮ ನಡೆಸಿ ಮಾತನಾಡಿದರು.
ಮೊದಲನೇ ಹಂತದಲ್ಲಿ 35 ಕೆರೆ
ಎರಡನೇ ಹಂತದಲ್ಲಿ 100 ಕೆರೆ ತುಂಬಿಸುವದಾಗಿದೆ ಯೋಜನೆಯಿಂದ
15 ರಿಂದ 20 ಸಾವಿರ ಹೇಕ್ಟರ್ ನಷ್ಟು ರೈತರ ಜಮೀನಿಗೆ ನೀರು ಒದಗಿಸುತ್ತದೆ.
ಅಮೃತ್ ಕನ್ಸ್ಟ್ರಕ್ಷನ್ ಕಂಪನಿವರು ಮಾತನಾಡಿ ಈಗಾಗಲೇ 35 ಕೆರೆಗಳಿಗೆ ಪೈಪ ಲೈನ್ ಕಾಮಗಾರಿ ಮುಕ್ತಾಯ ಹಂತ ತಲುಪಿದೆ ಡಿಸೆಂಬರ್ ಅಂತ್ಯದವರೆಗೆ ಕಾಮಗಾರಿ ಮುಗಿಸಲಾಗುವದು ಎಂದರು.
ನಂತರ ಸಚಿವ ಲಾಡ್ ಎರಡನೇ ಹಂತದಲ್ಲಿ 100 ಕೆರೆ ತುಂಬಿಸಲು ಯೋಜನಾ ವರದಿ ಕುರಿತು ಸರ್ವೇ ಕಾರ್ಯ ಕೈಗೊಂಡು ಇದಕ್ಕೆ ಪ್ರತ್ಯೇಕ ಡಿಪಿಆರ್ ತಯಾರಿಸಿ ಕೊಡಿ ನಾನು ಸರ್ಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಬಿಸಲು ಅನುಕೂಲವಾಗುತ್ತದೆ ಎಂದರು.
ನಂತರ ಹಲವು ಸಾರ್ವಜನಿಕರ ಕುಂದುಕೊರತೆ ಅರ್ಜಿ ಸ್ವೀಕರಿಸಿ ಈಡೇರಿಸುವ ಭರವಸೆ ನೀಡಿದರು ಕೆಲವಂದು ಸ್ಥಳದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿದರು.
ನಂತರ ತಾಲ್ಲೂಕಿನ ಬೆಲವಂತರ ಗ್ರಾಮದ ಹತ್ತಿರ ಬೇಡ್ತಿ ನಾಲಾ ನಡೆಯುವ ಕಾಮಗಾರಿ ಸ್ಥಳಕ್ಕೆ ರೈತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಾಮಗಾರಿಯಿಂದ ರೈತರಿಗೆ ಅಷ್ಟೇ ಅಲ್ಲದೆ ಈ ನೀರು ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ಮುಂದಿನ ದಿನಗಳಲ್ಲಿ ಉಪಯೋಗವಾಗುತ್ತದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ತಮ್ಮ ದಿನನಿತ್ಯದ ಕೆಲಸದ ಮಾಹಿತಿ ನನಗೆ ಸಲ್ಲಿಸಿ ಕೆಲಸ ಬೇಗನೆ ಮುಗಿಸಲು ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಅಮೃತ್ ಕನ್ಸ್ಟ್ರಕ್ಷನ್ ಕಂಪನಿಯ ಡೈರೆಕ್ಟರ್ ಶ್ರೀನಿವಾಸ ಎಂ, ಕಂಪನಿ ಜೆ. ಎಂ ರಾಧಾಕೃಷ್ಣ ರೆಡ್ಡಿ, ಪ್ರಾಜೆಕ್ಟ್ ಮ್ಯಾನೇಜರ್ ಬಸವರಾಜ ಇಟಗಿ, ಇಂಜನಿಯರ್ ಸುರೇಶ ಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಎಸ್. ಆರ್ ಪಾಟೀಲ, ಬಿ. ವೈ ಪಾಟೀಲ,ನರೇಶ ಮಲೆನಾಡು, ಲಾಡ್ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಗಂಗಾಧರ ಚಿಕ್ಕಮಠ, ಕಲ್ಲಯ್ಯ ಹಿರೇಮಠ,ರೈತ ಮುಖಂಡರಾದ ಉಳವಪ್ಪ ಬಳಿಗೇರಿ, ಡಾಕಪ್ಪ ಲಮಾಣಿ, ಅಜ್ಜಪ್ಪ ಕುರಟ್ಟಿ ಇದ್ದರು.