ಕರ್ನಾಟಕ ರಾಜ್ಯದ ಸಮಸ್ತ ಶಿಕ್ಷಕ ಶಿಕ್ಷಕಿಯರ ಪರವಾಗಿ ಸಾವಿತ್ರಿಬಾಯಿಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(,ರಿ)ನವದೆಹಲಿ.ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಘನ ಸರ್ಕಾರಕ್ಕೆ ದಸರಾ ರಜೆಯನ್ನು ಕಡಿತಗೊಳಿಸಬಾರದೆಂದು ಮನವಿ ಮಾಡಿದ್ದಾರೆ.
ದಸರಾ ರಜೆಯನ್ನು ಕಡಿತಗೊಳಿಸಬಾರದೆಂದು ಮನವಿ.. ರಾಜ್ಯಾದ್ಯಂತ ನಾಡಿನ ವಿಶ್ವವಿಖ್ಯಾತ ಹಬ್ಬವಾದ ದಸರಾ ಹೆಸರಿನಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 30 ರವರೆಗೆ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮದ್ಯಂತರವಾಗಿ ದಸರಾ ರಜೆಯನ್ನು ನೀಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಕೊರೋನ ಕಾರಣಕ್ಕೆ ಮಕ್ಕಳಿಗೆ ಪಾಠ ಪ್ರವಚನಗಳಿಗೆ ಅಡ್ಡಿಯುಂಟಾಗಿದ್ದರಿಂದ ಅದರ ಹಿನ್ನೆಲೆಯಲ್ಲಿ ಉಂಟಾಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ದಸರಾ ರಜೆಯನ್ನು ಕಡಿತಗೊಳಿಸಲಾಗಿತ್ತು. ಅದರಂತೆ ಶಿಕ್ಷಕರೆಲ್ಲರೂ ಅದನ್ನು ಸ್ವಾಗತಿಸಿ ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಹಜ…