ರಕ್ಷಾಬಂಧನ
ರಕ್ಷಾಬಂಧನ.. ಇದಾಗಿದೆ ಸಹೋದರತೆಯ ಮಾನವೀಯತೆಯ ಸಂಬಂಧಗಳ ಮಹತ್ವ ಸಾರುವ ಬಂಧನ. ಅಲ್ಲ ಇದು ವಿವಿಧ ಬಣ್ಣಗಳ ದುಭಾರಿ ಬೆಲೆಯ ದಾರದ ಹರಳುಗಳ ಚೆಲುವಿನ ಚಿತ್ತಾರದ ಕಂಕಣ. ಸಾರುತ್ತಿದೆ ಒಡಹುಟ್ಟಿದವರ ಪ್ರತಿಯೊಬ್ಬರ ಜೀವನದಲ್ಲಿ ಬರುವ ಪ್ರತಿಪುರುಷರು, ಪ್ರತಿಸ್ತ್ರೀಯರು ಸಹೋದರ, ಸಹೋದರಿಯರೆಂಬ ನೀತಿ ಕುಡಿರೋ ದಿಗ್ಬಂದನ. ಕೊಡಬೇಕಾಗಿದೆ ಎಲ್ಲ ಮಹಿಳೆಯರು ಪುರುಷರು ಸಹೋದರ, ಸಹೋದರಿಯರೆಂಬ ಭಾವನೆಯ ಹಾಗೂ ಸಂಸ್ಕೃತಿಯ ಕಡೆಗೆ ಗಮನ. ಭಾರತ ಮಾತೆಯ ಮಡಿಲಲ್ಲಿ ಇಂತಹ ಹಬ್ಬಗಳ ಆಚರಣೆ ಮಾಡಿತ್ತಿರುವ ನಾವೆಲ್ಲರೂ ಮುಟ್ಟಿ ನಮಸ್ಕರಿಸಬೇಕಿದೆ ಆಕೆಯ ಪುಣ್ಯ ಚರಣ….