ಮೆಲುಕು
ಮೆಲುಕು ಬೆಳ್ಳಂ ಬೆಳ್ಗೆ ಅವ್ವನ ಕೂಗು ಕೇಳಿದ್ರೂ ಕೇಳದಂತೆ ಮಲ್ಗೋದು ಇತ್ತ ನಾನುನೂ ಕಿರುಚಿದೆ ಅವ್ವ ಕರಿತೈತೆ ಎದ್ದೇಳಣ್ಣಯ್ಯ ಜಳಕಾ ಮಾಡಿ ಮಡಿಉಟ್ಕೊ ರಾಕಿ ಕಟ್ಟಸ್ಕೊ ಹಬ್ಬಾ ಐತಿ ಸೋಂಬೇರಿ ಸೋಮಾರಿ ನೀ ಹೊರ್ಗ ಹೋಗಬ್ಯಾಡಾ ಅಣ್ಣಯ್ಯ ಮತ್ತದೇ ಜಗಳಾ ಜಡೆ ಎಳೆದು ರಿಬ್ಬನ್ ಜಗ್ಗಿ ನೂಕಿ ಓಡೋದು ಅವ್ವನ ದನಿಗೆ ಮುದುಡಿಕೊಳ್ಳುವ ಮುದ್ದು ಪೆದ್ದು ಅಣ್ಣಯ್ಯ ರಾಕಿ ಕಟ್ಟಿ ಸಕ್ಕರೆ ಬದಲು ಉಪ್ಪು ತಿನಿಸಿ ಗೋಳಾಡಿಸಿ ತಲೆಗೂದಲ ಜಗ್ಗಿ ತಿವಿದು ಓಡಿದ ನೆನಪು ಮಾಸಿಲ್ಲ ಅಣ್ಣಯ್ಯ…