ಮುನವಳ್ಳಿ ಸೋಮಶೇಖರ ಮಠದ ಶ್ರೀ ಮ. ನಿ. ಪ್ರ. ಸ್ವ ಮುರುಘೇಂದ್ರ ಮಹಾಸ್ವಾಮಿಗಳವರ ಜನ್ಮ ದಿನ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಬರಹ
ಮುನಿಪುರಾಧೀಶರು ಮುರುಘೇಂದ್ರ ಶ್ರೀಗಳು ಜೂನ್ ೧೦ ರಂದು ಮುನವಳ್ಳಿ ಸೋಮಶೇಖರ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ೫೦ನೇ ಜನ್ಮದಿನ.ಇದನ್ನು ಭಕ್ತರು ವೈಶಿಷ್ಟ್ಯಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟಿಸಿರುವರು. ಪೂಜ್ಯರ ಜನ್ಮದಿನ ಬಂದರೆ ಸಾಕು ಸಮಾಜಮುಖಿ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಕಲ ಸದ್ಬಕ್ತರು ಜನ್ಮ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದು.ಮಾತೃ ಹೃದಯದ ಮುರುಘೇಂದ್ರ ಮಹಾಸ್ವಾಮಿಗಳು ನಿಜಕ್ಕೂ ತಮ್ಮ ಸಮಾಜಮುಖಿ ಚಟುವಟಿಕೆಗಳ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ ಇಲ್ಲಿನ ಸೋಮಶೇಖರ ಮಠ ತನ್ನದೇ ಆದ ಮುನಿ ಪರಂಪರೆ ಹೊಂದಿದ್ದು ಈ…