ಮುನವಳ್ಳಿ ಜೈಂಟ್ಸ ಗ್ರುಪ್ ನ ಮಕ್ಕಳ ದಿನಾಚರಣೆಯಂದು ಜರುಗಿದ ವಿಶಿಷ್ಟ ಕಾರ್ಯ ಕ್ರಮ ಹಾಗೂ ಜೈಂಟ್ಸ ಗ್ರುಪ್ ಮುನವಳ್ಳಿ ನಡೆದು ಬಂದ ಹಾದಿ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಬರಹ
ಮುನವಳ್ಳಿ ಜೈಂಟ್ಸ್ ಗ್ರುಪ್ ಮುನವಳ್ಳಿಯಿಂದ ವಿಶಿಷ್ಟ ಮಕ್ಕಳ ದಿನಾಚರಣೆ ಮುನವಳ್ಳಿಯ ಪ್ರಸಿದ್ದ ಐತಿಹಾಸಿಕ ಸ್ಥಳ ಶ್ರೀ ಪಂಚಲಿಂಗೇಶ್ವರ ದೇವಾಲಯ. ಈ ದೇವಾಲಯದ ಆವರಣದಲ್ಲಿ ಬುಧವಾರ ಮಕ್ಕಳ ಕಲರವ ಜೋರಾಗಿತ್ತು. ಅಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು ಶಿಕ್ಷಕಿಯರು ಮಕ್ಕಳು ಒಂದೆಡೆ ತಮ್ಮ ತಮ್ಮ ಶಾಲೆಗಳ ಮಕ್ಕಳ ನೃತ್ಯದ ತಯಾರಿಯ ವೇಷಭೂಷಣದಲ್ಲಿ ತೊಡಗಿದ್ದರೆ. ಮತ್ತೊಂದೆಡೆ ಬಸವ ಸೇನೆ ಅಧ್ಯಕ್ಷರು ಹಾಗೂ ಜೈಂಟ್ಸ ಗ್ರುಪ್ನ ಹಿರಿಯರಾದ ಉಮೇಶ ಬಾಳಿ ಮತ್ತು ಜೈಂಟ್ಸ ಗ್ರುಪ್ ಅಧ್ಯಕ್ಷ ಶಿವಾಜಿ ಮಾನೆ ಕಾರ್ಯಕ್ರಮಕ್ಕೆ ಆಗಮಿಸುವ…