ಮುಖ್ಯೋಪಾಧ್ಯಾಯರಾದ ಗೂಳಪ್ಪನವರ ಅವರ ನಿವೃತ್ತಿ ಬೀಳ್ಕೊಡುವ ಸಮಾರಂಭದ ಕ್ಷಣಗಳ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರ ನೋವು ನಲಿವಿನಲ್ಲಿ ಹೆಜ್ಜೆ ಹಾಕುವ ಹೊತ್ತು ಬರಹ
ನೋವು ನಲಿವಿನಲ್ಲಿ ಹಜ್ಜೆ ಹಾಕುವ ಹೊತ್ತು ಎಲ್ಲಿಂದಲೋ ಬಂದು ಇಲ್ಲಿ ಅಂಗಳದಲ್ಲಿ ತಾವರೆ ಹೂವೊಂದು ಅರಳಿತಲ್ಲ. ಈ ಹಾಡು ಚಿಕ್ಕ ಉಳ್ಳೀಗೇರಿಯ ಶಾಲಾ ಆವರಣದಲ್ಲಿ ದಿನಾಂಕ ೩೦-೯-೨೦೨೩ ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳಾದ ಶ್ರೀ ಎಸ್ ಜಿ ಗೂಳಪ್ಪನವರರವರ ವಯೋನಿವೃತ್ತಿ ಬೀಳ್ಕೊಡುವ ಸಮಾರಂಭ ಕ್ಷಣಗಳನ್ನು ಕಂಡಾಗ ಈ ಹಾಡಿನ ಸಾಲುಗಳು ಮಾರ್ದನಿಸತೊಡಗಿದವು. ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ವಿದಾಯ ಸಹಜ.ವರ್ಗಾವಣೆ ಇರಬಹುದು ನಿವೃತ್ತಿ ಇರಬಹುದು. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಉನ್ನತ…