ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಕುರಿತು ಚಿಂತನಾತ್ಮಕ ಬರಹ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರಿಂದ
ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ “ಅಮ್ಮ ಇಂದು ನನಗೆ ಹೊಟ್ಟೆ ನೋಯುತ್ತಿದೆ. ಶಾಲೆಗೆ ಹೋಗಲಾರೆ”, ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ಆತನ ತಂದೆ ತಾಯಿ ಆತನ ಹಠಮಾರಿತನ ಎಂದು ಭಾವಿಸುತ್ತಾನೆ. ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ. ಅವರೇನೋ ಆತನದು ಹಠಮಾರಿತನ ಎಂದು ಭಾವಿಸಿದ್ದಾರೆ ಆತ ನಿಜವಾಗಿಯೂ ಅನಾರೋಗ್ಯಕ್ಕೀಡಾಗಿದ್ದಾನೆ. ಆತನಿಗೆ ಶಾಲೆಗೆ ಹೋಗುವ ಭಯವಿರಬಹುದೆಂದು ಅವರು ಭಾವಿಸುವುದಿಲ್ಲ. ?…