ಭಾ ವಾಂತರಂಗ
ಭಾ ವಾಂತರಂಗ. ಹೃದಯವೆಂಬ ಸಮುದ್ರದಲ್ಲಿ. ನೂರೆಂಟು ಭಾವನೆಯ ಅಲೆಗಳು ನಿಲ್ಲುತ್ತಿಲ್ಲ ಕ್ಷಣ ಮಾತ್ರ ಅಪ್ಪಳಿಸುತ್ತಿವೆ ಎಡೆ ಬಿಡದೆ ಕಾಡುತ್ತಿವೆ ಸುಮ್ಮನಿರದೆ ಒಮ್ಮೆ ಮೌನ, ಮತ್ತೊಮ್ಮೆ ಸಿಟ್ಟು ಮಗದೊಮ್ಮೆ ನಗು ಆಮೇಲೆ ಅಳು ಹೀಗೆ ಸಾಗುತಿದೆ ಸಂಸಾರ ಸಾಗರ. ಕಳೆದು ಹೋಗಿವೆ ಸಾಕಷ್ಟು ಸುಂದರ ಸವಿನೆನಪುಗಳ ಸಚಿತ್ರಗಳು ನಗುವ ಕಡಲಲ್ಲಿ ತೇಲುವೆ ಅವುಗಳ ಮೆಲುಕು ಹಾಕುತ. ಕೊಚ್ಚಿ ಹೋಗಲು ಬಿಡುವೆ ಕಹಿ ನೆನಪುಗಳ ಮೆರವಣಿಗೆಯನ್ನ. ನಡು ನಡುವೆ ಇಂಪಾದ ಮನಸಿನ ಸಂಗೀತದ ಸುಶ್ರಾವ್ಯದ ಅನುರಾಗ. ಕಳೆಯುವುದು ದುಃಖದ ಜ್ಯಾಡ್ಯ…